ಪರಪ್ಪ ಬ್ಲಾಕ್‌ಗೆ ಆ್ಯಸ್ಪಿರೇಷನ್ ಪ್ರಶಸ್ತಿ

10
Published on

ಕಾಸರಗೋಡು: ಆ್ಯಸ್ಪಿರೇಷನ್ ಬ್ಲಾಕ್ ಹೆಮ್ಮೆಯ ಸಾಧನೆಗಾಗಿ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಸಾಧನೆಗಾಗಿ ಪರಪ್ಪ ಬ್ಲಾಕ್ ಆಯ್ಕೆಗೊಂಡಿದ್ದು, ಏ.21ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಅತ್ಯುತ್ತಮ ಕೆಲಸ ಮಾಡಿದವರನ್ನು ಆಯ್ಕೆ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಭಿವೃದ್ಧಿ ಹಾಗೂ ಕಲ್ಯಾಣ ಚಟುವಟಿಕೆಗೆ ಒಳಪಡುವ ಮೂಲಕ ಪರಪ್ಪ ಬ್ಲಾಕ್ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ 426 ಆ್ಯಸ್ಪಿರೇಶನ್ ಬ್ಲಾಕ್‌ಗಳ ಪೈಕಿ ಪರಪ್ಪ ಬ್ಲಾಕ್ ಪ್ರಥಮ ಸ್ಥಾನ ಗಳಿಸಿದೆ. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ ನೇತೃತ್ವದ ಆಡಳಿತ ಮಂಡಳಿ ಸಹಾಯದಿಂದ ಉತ್ತಮ ಸಾಧನೆಗೈಯಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿಯಾಗಿ ಕೆ.ಇನ್ಬಾಶೇಖರ್ ಅಧಿಕಾರ ವಹಿಸಿಕೊಂಡ ನಂತರ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಸಹಿತ ಜಿಲ್ಲೆಗೆ ಐದು ಪ್ರಶಸ್ತಿ ಲಭಿಸಿದ್ದು, ಇದೇ ಮೊದಲ ಬಾರಿ ಪ್ರಧಾನಮಂತ್ರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net