

ಬಂಟ್ವಾಳ: ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ ಮತ್ತು ತ್ಯಾಗ ಮನೋಭಾವ ಇದ್ದರೆ ಸಂಘಟನೆ ಮಾಡಲು ಸಾಧ್ಯ. ಸಂಘ ಒಬ್ಬನ ಸ್ವತ್ತಲ್ಲ. ಅದು ಆ ಸಮಾಜದ ಎಲ್ಲರ ಸ್ವತ್ತು. ಯುವಕರು ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸಂಘಟನೆ ಅದ್ಭುತವಾಗಿ ಬೆಳೆಯುತ್ತದೆ ಎಂದು ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಆನಂದ ನಾಯ್ಕ ದಾಸಕೋಡಿ ನೆಲ್ಲಿ ಹೇಳಿದರು.
ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಕಲ್ಲಡ್ಕ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್ ನಾಯ್ಕ ಬಿ.ಆರ್.ನಗರ ವರದಿ ವಾಚಿಸಿದರು. ಖಜಾಂಚಿ ಶಿವಪ್ಪ ನಾಯ್ಕ ಕೊಳಕೀರು ಕಲ್ಲಡ್ಕ ಲೆಕ್ಕಪತ್ರ ಮಂಡಿಸಿದರು. ವಿಠಲ್ ನಾಯ್ಕ ನೆಲ್ಲಿ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ಮರಾಟಿ ಸಮಾಜ ಸೇವಾ ಸಂಘ ಮಾಜಿ ಅಧ್ಯಕ್ಷ ಜಿನ್ನಪ್ಪ ನಾಯ್ಕ ಕಂಚಿಲ ನೇತೃತ್ವದಲ್ಲಿ 2024-2025ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚಿಸಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನಾರಾಯಣ ನಾಯ್ಕ ಪೆರ್ನೆ ನೂತನ ಅಧ್ಯಕ್ಷ ಹಾಗೂ ವಿಠಲ ನಾಯ್ಕ ದಾಸಕೋಡಿ ನೆಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ವಿಶ್ವನಾಥ ನಾಯ್ಕ ಕೋಮಾಲಿ ಗೌರವ ಅಧ್ಯಕ್ಷ, ಆನಂದ ನಾಯ್ಕ ದಾಸಕೋಡಿ ಸಂಚಾಲಕ, ಅಣ್ಣು ನಾಯ್ಕ ನಗ್ರಿ, ಸುಂದರ ನಾಯ್ಕ ವಗ್ಗ ಮತ್ತು ನಾರಾಯಣ ನಾಯ್ಕ ಕೊನೆತೋಟ ಉಪಾಧ್ಯಕ್ಷರಾಗಿ, ಉಮೇಶ್ ನಾಯ್ಕ ಬಿ.ಆರ್.ನಗರ ಖಜಾಂಚಿ, ಸುಂದರ ನಾಯ್ಕ ಕಲ್ಲಪಾಪು ಕಾರ್ಯದರ್ಶಿ, ಬಾಲಕೃಷ್ಣ ನಾಯ್ಕ ಕೆ.ಬೆಳ್ಳಾರೆ ಸಂಘಟನಾ ಕಾರ್ಯದರ್ಶಿ, ಅಂಕಿತಾ ಬರಿಮಾರು ಮತ್ತು ಗಿರೀಶ್ ನಾಯ್ಕ ಮಾಣಿ ಜತೆ ಕಾರ್ಯದರ್ಶಿ, ರವಿ ಸಿಂಗೇರಿ ಸಾಂಸ್ಕೃತಿಕ ಕಾರ್ಯದರ್ಶಿ, ಉಷಾ ವಗ್ಗ ಕ್ರೀಡಾ ಕಾರ್ಯದರ್ಶಿ, ಕೇಶವ ನಾಯ್ಕ ಪಿ., ಜಿನ್ನಪ್ಪ ನಾಯ್ಕ ಕಂಚಿಲ, ಸುಂದರ ನಾಯ್ಕ ಪದ್ಯಾಣ, ಶಶಿಧರ್ ನಾಯ್ಕ ಮಾಣಿಬೆಟ್ಟು ಮತ್ತು ಕೃಷ್ಣ ನಾಯ್ಕ ಪಿ.ಮಹಾಕಾಳಿಬೆಟ್ಟು ಬಿ.ಸಿ.ರೋಡು ಗೌರವ ಸಲಹೆಗಾರರಾಗಿ ಆಯ್ಕೆಯಾದರು.