

ಮೂಡಲಗಿ: ಸಾರಿಗೆ ಬಸ್ ನಿರ್ವಾಹಕನ ಮೇಲಿನ ಮರಾಠಿಗರ ದೌರ್ಜನ್ಯ ಖಂಡಿಸಿ ಕನ್ನಡಪರ ಸಂಟನೆಗಳ ಒಕ್ಕೂಟದ ಕಾರ್ಯಕರ್ತರು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ್ ಶಿವಾನಂದ ಬಬಲಿಗೆ ಮನವಿ ಸಲ್ಲಿಸಿದರು.
ಕನ್ನಡಪರ ಸಂಟನೆ ಮುಖಂಡ ಸಚಿನ್ ಲೆಂಕೆನ್ನವರ, ಶಿವರೆಡ್ಡಿ ಹುಚ್ಚರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಹೆಚ್ಚುತ್ತಿದ್ದು ಖಂಡನೀಯ. ರಾಜ್ಯದ ಬಸ್ ನಿರ್ವಾಹಕನ ಮೇಲೆ ದೌರ್ಜನ್ಯ ಮಾಡಿದ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಂಟನೆಯ ಮುಖಂಡರಾದ ಲ$್ಮ್ಮಣ ಮೇಳಿಗೇರಿ, ನಂಜುಂಡಿ ಸರ್ವಿ, ಪ್ರಕಾಶ ಸಣ್ಣಕ್ಕಿ, ಸಂಜು ಯಾಕ್ಸಂಬಿ, ಸಂತೋಷ ಕೆಳಗಡೆ, ಪ್ರಭು ತೇರದಾಳ ಇತರರಿದ್ದರು.