ರಾತ್ರಿಯಲ್ಲಿ ಮಹಿಳೆಯನ್ನು ರಕ್ಷಿಸಿದ ಮರಸಣ್ಣ

Untitled design(3)
ಕುಷ್ಟಗಿಯಲ್ಲಿ ಮಹಿಳೆಯನ್ನು ಮರಸಣ್ಣ ಅವರು ಪೊಲೀಸರಿಗೆ ಒಪ್ಪಿಸಿದರು. ಪೇದೆ ಮಂಜುನಾಥ ಹಾಗೂ ಗೃಹರಕ್ಷಕ ಸಿಬ್ಬಂದಿ ಇದ್ದರು.
Published on

ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದಲ್ಲಿ ದಿಕ್ಕುತೋಚದೆ ಒಬ್ಬಂಟಿಯಾಗಿ ನಿಂತಿದ್ದ ಮಹಿಳೆಯನ್ನು ಸ್ಥಳೀಯ ಮರಸಣ್ಣ ತಾಳದ್ ಅವರು ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಸಮಯ ಪ್ರಜ್ಞೆ ಮೆರೆದ ಮರಸಣ್ಣ

ಪಟ್ಟಣದ ಗಜೇಂದ್ರಗಡ ರಸ್ತೆಯ ಡಾಬಾ ಮಾಲೀಕ ಮರಸಣ್ಣ ತಾಳದ್ ಅವರು ಮನೆಗೆ ತೆರಳುವಾಗ ಮಹಿಳೆಯನ್ನು ನೋಡಿದ್ದಾರೆ. ಆತಂಕದಲ್ಲಿದ್ದ ಮಹಿಳೆಯನ್ನು ವಿಚಾರಿಸಿದಾಗ ಮಹಿಳೆ ತಾನು ಓಡಿಸ್ಸಾ ಮೂಲದವರೆಂದು ತಿಳಿಸಿದ್ದಾರೆ. ಪತಿಯೊಟ್ಟಿಗೆ ಲಾರಿಯಲ್ಲಿ ಬರುತ್ತಿದ್ದಾಗ ಮೂತ್ರ ವಿಸರ್ಜನೆಗೆಂದು ಕೆಳಗಿಳಿದಾಗ ಗಂಡ ಬಿಟ್ಟು ಹೋಗಿದ್ದಾರೆಂದು ಹೇಳಿಕೊಂಡಿದ್ದಾರೆ. ಆಗ ಮರಸಣ್ಣ ಅವರು ಕೂಡಲೇ ಠಾಣೆಗೆ ಫೋನ್ ಕರೆ ಮಾಡಿದ್ದಾರೆ. ಬಳಿಕ ಪೇದೆ ಮಂಜುನಾಥ್ ಮಹಿಳೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net