

ಬೈಲಹೊಂಗಲ: ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆ ಜಾರಿ ಮಾಡಿದ್ದು, ಸದುಪಯೋಗ ಪಡೆದು ಶೆಣಿಕ ೇತ್ರದಲ್ಲಿ ಗಣನೀಯ ಸಾಧನೆ ಮಾಡಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಶಾಸಕರ ೇತ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ. 4ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವ ಪ್ರಾಥಮಿಕ ತರಗತಿ (ಎಲ್ಕೆಜಿ) ಮತ್ತು ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಹಾಗೂ 1ನೇ ತರಗತಿ ಮಕ್ಕಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬದುಕಿಗೆ ಶಿಣ ಅತೀ ಅವಶ್ಯ. ಹಾಗಾಗಿ ಸರ್ಕಾರ ಶಿಕ್ಷಣ ರಂಗಕ್ಕೆ ಸಾಕಷ್ಟು ಪ್ರೋತ್ಸಾಹಿಸುತ್ತಿದೆ ಎಂದರು.
ಎಸ್ಡಿಎಂಸಿ ಅಧ್ಯ ಅರ್ಜುನ ಕಲಕುಟಕರ ಮಾತನಾಡಿ, ಪಟ್ಟಣದಲ್ಲಿನ ಶಾಸಕರ ೇತ್ರದ ಶಾಲೆಯು ಶಾಸಕರು, ಎಸ್ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳ ಸಹಕಾರ&ಪ್ರೋತ್ಸಾಹದಿಂದ ಹೊಸ ಮೆರುಗು ಪಡೆದಿದೆ. ಮುಂಬರುವ ದಿನಗಳಲ್ಲಿ ವಿದ್ಯಾಕೇಂದ್ರ ಮಾದರಿಯಾಗಿಸುವೆ ಎಂದರು. ಬಿಇಒ ಎ.ಎನ್. ಪ್ಯಾಟಿ, ಶಿಣ ಸಂಯೋಜಕ ಬಿ.ಎನ್.ಕಸಾಳೆ,
ಮುಖ್ಯಶಿಕ್ಷಕ ಡಿ.ಎನ್. ಹಲಕಿ, ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ಶೀಗಿಹಳ್ಳಿ, ಎಸ್ಡಿಎಂಸಿ ಉಪಾಧ್ಯೆ ಗಂಗಮ್ಮ ಸಾಲಿ, ಸದಸ್ಯರಾದ ಮಹಾಂತೇಶ ರಾಜಗೋಳಿ, ಗದಿಗೆಪ್ಪ ಮಡಿವಾಳರ, ರಾಮನಿಂಗ ಗೋಣಿ, ಪೂಜಾ ಕೋಟಬಾಗಿ, ಭಾರತಿ ಬಾದಾಮಿ, ಪವಿತ್ರಾ ತಲ್ಲೂರ, ನಿರ್ಮಲಾ ರಾಜಗೋಳಿ, ಶಾಂಭವಿ ಹೂಲಿ, ಶಿಕರಾದ ಸಂದೀಪ ಕುಲಕರ್ಣಿ, ಸಿ.ಎಸ್. ಧರೆಪ್ಪನವರ, ಆರ್.ಜಿ.ಸಾಲಿ ಇತರರಿದ್ದರು.