ಚಿಂತಾಮಣಿ: ನಗರದ ಕನ್ನಂಪಲ್ಲಿ ಬಳಿ ಭಾನುವಾರ ಪಾದಚಾರಿಗಳಿಗೆ ಬೈಕ್ ಡಿಕ್ಕಿಯಾಗಿ ಮಗು ಸೇರಿ ಮೂವರು ಗಾಯಗೊಂಡರೆ, ಬೈಕ್ ಸವಾರರಿಬ್ಬರು ಬಿದ್ದು ಗಾಯಗೊಂಡಿದ್ದಾರೆ. ನಗರದ ಕನ್ನಂಪಲ್ಲಿಯ ನಿವಾಸಿಗಳಾದ ಕಿಟ್ಟಪ್ಪ, ನಂದಿನಿ ಮತ್ತು 1 ವರ್ಷದ ಮಗು ಹಾಗೂ ಅಪಘಾತ ಎಸಗಿದ ಬೈಕ್ ಸವಾರರು ಅಂಬಾಜಿದುರ್ಗ ಹೋಬಳಿ ಉಪ್ಪಾರಪೇಟೆಯ ಶೇಕ್ ಜಮೀರ್ ಮತ್ತು ಸೈಯದ್ ಅವೇಜ್ ಗಾಯಗೊಂಡವರು. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.