ಮನುಕುಲಕ್ಕೆ ಆದರ್ಶವಾದ ನೇತಾರ

14-april-hdl-01
ಹೂವಿನಹಡಗಲಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಶಾಸಕ ಕೃಷ್ಣನಾಯ್ಕ ಪುಷ್ಪ ನಮನ ಸಲ್ಲಿಸಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ತಾಪಂ ಇಒ ಉಮೇಶ್ ಮೈನಹಳ್ಳಿ ಇತರರಿದ್ದರು.
Published on

ಹೂವಿನಹಡಗಲಿ: ದೇಶದಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ವ್ಯಕ್ತಿಯೂ ದೇಶದ ಉನ್ನತ ಹುದ್ದೆಯನ್ನು ಹೊಂದುವ ಅವಕಾಶವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನೀಡಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ತೇರು ಹನುಮಪ್ಪ ಬಯಲು ವೇದಿಕೆಯಲ್ಲಿ ಸೋಮವಾರ ತಾಲೂಕು ಆಡಳಿತ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಸಾಮಾನತೆಗಾಗಿ ಹೋರಾಟ ಮಾಡಿದ ಅಂಬೇಡ್ಕರ್ ಅವರು ದಲಿತರು ಮತ್ತು ಹಿಂದುಳಿದವರಿಗಷ್ಟೇ ಸೀಮಿತವಲ್ಲ.

ದೇಶದಲ್ಲಿ ಯಾವುದೇ ತಾರತಮ್ಯವಿಲ್ಲದಂತೆ ಎಲ್ಲರೂ ಸಮಾನವಾಗಿ ಬದುಕಲು ಅವಕಾಶ ಕಲ್ಪಿಸುವ ಸಂವಿಧಾನವನ್ನು ರಚಿಸುವ ಮೂಲಕ ಮನುಕುಲಕ್ಕೆ ಆದರ್ಶವಾಗಿದ್ದಾರೆ ಎಂದರು.

ಎಲ್ಲ ಧರ್ಮ, ಜಾತಿಯವರು ಸಾಮರಸ್ಯದಿಂದ ಬದುಕಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿದೆ.

ಅಂಬೇಡ್ಕರ್ ಅವರ ಆದರ್ಶಗಳನ್ನು ರೂಢಿಸಿಕೊಳ್ಳುವ ಮೂಲಕ ಅಸಮಾನತೆ ಕಿತ್ತು ಹಾಕುವ ಕೆಲಸ ಮಾಡೋಣ. ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಜಾಲರಿ ತೆರವು ಮಾಡಿ ಸುವ್ಯವಸ್ಥಿತ ರೀತಿಯಲ್ಲಿ ಕಂಚಿನ ಪುತ್ಥಳಿ ಅನಾವರಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ತಿಳಿಸಿದರು.

ಉಪನ್ಯಾಸಕಿ ನಿರ್ಮಲಾ ಶಿವನಗುತ್ತಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಕೀಲ ಎಚ್.ಪೂಜಪ್ಪ, ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್ ಬೀ, ತಹಶೀಲ್ದಾರ್ ಜಿ.ಸಂತೋಷ ಕುಮಾರ್, ತಾಪಂ ಇಒ ಎಂ.ಉಮೇಶ,

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪವಿಭಾಗದ ಎಇಇ ಅಂಬೇಡ್ಕರ್ ಸನಗುಂದ, ಒಳಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಪ್ರಮುಖರಾದ ಪಿ.ವಿಜಯಕುಮಾರ್, ಎಚ್.ಚಂದ್ರಪ್ಪ, ಎಸ್.ನಿಂಗರಾಜ ಗುಡುದಯ್ಯ, ಪಿ.ನಿಂಗಪ್ಪ, ಎಂ.ಪರಮೇಶ್ವರಪ್ಪ, ಜೆ.ಶಿವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net