

ತಿ.ನರಸೀಪುರ: ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ರಾಜಕೀಯ ಅಧಿಕಾರ ಸಾಮಾನ್ಯರ ಕೈಗೆ ಸಿಗುವಂತಾಯಿತು ಎಂದು ಕಿರಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ನಿಂಗರಾಜು ಹೇಳಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಜನರ ವಿವೇಚನೆಗೆ ಬಿಟ್ಟದ್ದು ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚುವಂತೆ ಮಾಡಿದೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರಣೇಶ್, ಮಾಜಿ ಅಧ್ಯಕ್ಷೆ ಚಂದ್ರಮ್ಮ, ಮಾಜಿ ಉಪಾಧ್ಯಕ್ಷ ಹುಣಸೂರು ನಾಗರಾಜ್, ಸದಸ್ಯರಾದ ಶಿವರಾಜು, ಕಿರಗಸೂರು ಮಹದೇವಸ್ವಾಮಿ, ಬಿಲಿಗೆರೆಹುಂಡಿ ಮಹೇಶ್, ಕಾರ್ಯದರ್ಶಿ ಮೀನಾಕ್ಷಿ, ಮುಖಂಡರಾದ ಏಳುಮಲೆ ಮಂಜು, ಬಿಲಿಗೆರೆಹುಂಡಿ ಮಹದೇವಸ್ವಾಮಿ, ಮುತ್ತಯ್ಯ, ಆನಂದ ಕೃಷ್ಣ, ಗ್ರಂಥಪಾಲಕ ರಜನಿ ಹಾಗೂ ಸಿಬ್ಬಂದಿ ಇದ್ದರು.