ಮಂತ್ರವಾಡಿಯಲ್ಲಿ ಸಂಭ್ರಮದ ಮಹಾರಥೋತ್ಸವ

11 svr 04
Published on

ಸವಣೂರ: ತಾಲೂಕಿನ ಸುಕ್ಷೇತ್ರ ಮಂತ್ರವಾಡಿಯ ಲಿಂ. ಶ್ರೀಕೆಂಜಡೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳ 43ನೇ ಪುಣ್ಯರಾಧನೆ ಹಾಗೂ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.

ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಗೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಕೆಂಜಡೇಶ್ವರ ಶ್ರೀಗಳ ಪುಣ್ಯತಿಥಿ ಹಾಗೂ ಮಧ್ಯಾಹ್ನ ಅನ್ನದಾಸೋಹ ಜರುಗಿತು.

ಬಳಿಕ ವಿವಿಧ ವಾದ್ಯ ವೈಭಗಳೊಂದಿಗೆ ಶ್ರೀ ಮಠದಿಂದ ರೇವಣಸಿದ್ಧೇಶ್ವರ ಬೆಳ್ಳಿಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಆರಂಭಗೊಂಡು ಮರಳಿ ಬೆಟ್ಟ ತಲುಪಿತು. ಸಂಜೆ ಕೆಂಜಡೇಶ್ವರ ಬೆಟ್ಟದಲ್ಲಿ ಸೇರಿದ್ದ ಸಾವಿರಾರು ಭಕ್ತರು, ಗ್ರಾಮಸ್ಥರ ಮಧ್ಯೆ ಮಹಾರಥೋತ್ಸವ ಮತ್ತು ಸಿದ್ಧರಾಮೇಶ್ವರ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net