ಮಣೂರು ದೇಗುಲದ ರಥೋತ್ಸವ ಸಂಪನ್ನ

rathotsava
ಮಣೂರು ಶ್ರೀ ಮಹಾಲಿಂಗೇಶ್ವರ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
Published on

ಕೋಟ: ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಮಣೂರು ಶ್ರೀ ಮಹಾಲಿಂಗೇಶ್ವರ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಶನಿವಾರ ಸಂಪನ್ನಗೊಂಡಿತು.

ರಥೋತ್ಸವವು ಕೋಟ ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಮೃತೇಶ್ವರಿ ದೇಗುಲ ಸಮೀಪ ಆಗಮಿಸಿ ಭಕ್ತರು ಮಹಾಲಿಂಗೇಶ್ವರನ ತೇರು ಎಳೆದು ಪುನೀತರಾದರು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಒಂದೂವರೆ ಕಿ.ಮೀ. ಸಂಚರಿಸಿದ ರಥೋತ್ಸವದಲ್ಲಿ ಕೀಲು ಕುದುರೆ, ವಿವಿಧ ರೀತಿಯ ಗೊಂಬೆಗಳು, ಸ್ತಬ್ಧ ಚಿತ್ರಗಳು, ಕೇರಳ ಚೆಂಡೆ, ವಾದ್ಯಘೋಷಗಳು, ತಟ್ಟಿರಾಯ ಗಮನಸೆಳೆದವು.

ದೇವಸ್ಥಾನದ ಅಧ್ಯಕ್ಷ ಸತೀಶ್ ಎಚ್.ಕುಂದರ್, ಟ್ರಸ್ಟಿಗಳಾದ ರವಿ ಐತಾಳ್, ಅಶೋಕ್ ಶೆಟ್ಟಿ, ದಿವ್ಯಾ ಪ್ರಭು, ಅಚ್ಯುತ್ ಹಂದೆ, ಕೃಷ್ಣ ದೇವಾಡಿಗ, ಸುಫಲ ಶೆಟ್ಟಿ, ದಿನೇಶ್ ಆಚಾರ್, ಚಂದ್ರ ಹರ್ತಟ್ಟು, ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಅರುಣಾಚಲ ಮಯ್ಯ, ವಿಷ್ಣುಮೂರ್ತಿ ಮಯ್ಯ, ಮಹೇಶ್ ಹೊಳ್ಳ, ಗೋಪಾಲ ಪೈ, ರಾಜೇಂದ್ರ ಉರಾಳ ಸೇರಿದಂತೆ ಸಹಸ್ರಾರು ಮಂದಿ ರಥೋತ್ಸವದಲ್ಲಿ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net