

ಗಂಗೊಳ್ಳಿ: ಗಂಗೊಳ್ಳಿ ಲೈಟ್ಹೌಸ್ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ನೇತೃತ್ವದಲ್ಲಿ ಗಂಗೊಳ್ಳಿಯ ಲೈಟ್ಹೌಸ್ ಮಡಿ ಎಂಬಲ್ಲಿ ದಾನಿಗಳ ಹಾಗೂ ಸಮಾಜಬಾಂಧವರ ಸಹಕಾರದಿಂದ ಅಭಿವೃದ್ಧಿಪಡಿಸಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಹಿಂದು ರುದ್ರಭೂಮಿಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.
ಹಿರಿಯರಾದ ಮಡಿ ಬಿಕ್ಯ ಖಾರ್ವಿ, ರಾಮ ಖಾರ್ವಿ, ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಅಧ್ಯಕ್ಷ ಚಂದ್ರ ಕೆ.ಖಾರ್ವಿ, ಮಾಜಿ ಅಧ್ಯಕ್ಷ ಬಿ. ನಾಗರಾಜ ಖಾರ್ವಿ ಕೊಲ್ಲೂರು, ಗೌರವಾಧ್ಯಕ್ಷ ಮಡಿ ಮಾಧವ ಖಾರ್ವಿ, ಉಪಾಧ್ಯಕ್ಷ ಕಿರಣ್ ಖಾರ್ವಿ, ಕಾರ್ಯದರ್ಶಿ ಮಡಿ ಚೇತನ್ ಖಾರ್ವಿ, ಸಂಘದ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು. ಮಡಿ ವಿಶ್ವನಾಥ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ಎನ್.ನಾಗರಾಜ್ ಖಾರ್ವಿ ವಂದಿಸಿದರು.