

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ದಕ್ಷತೆ, ಸಹೃದಯತೆ, ಶಿಸ್ತು, ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮನೋಹರ ಶೆಟ್ಟಿಯವರು ಸಮಾಜಕ್ಕೆ ಅನುಕರಣೀಯರು. ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇಗುಲ ಆನುವಂಶಿಕ ಮೊಕ್ತೇಸರ, ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು ಹೇಳಿದರು.
ಶ್ರೀ ದೇಗುಲದಲ್ಲಿ 12 ವರ್ಷ ಆನುವಂಶಿಕ, ಆಡಳಿತ ಮೊಕ್ತೇಸರರಾಗಿ ದಕ್ಷ ಆಡಳಿತ ನೀಡಿ ಸ್ವರ್ಗಸ್ಥರಾದ ಎನ್.ಎಸ್.ಮನೋಹರ ಶೆಟ್ಟಿ ಕಕ್ವಗುತ್ತು ಅವರ ಗೌರವಾರ್ಥ ಶ್ರೀ ಕ್ಷೇತ್ರ ಬಪ್ಪನಾಡು ಜ್ಞಾನ ಮಂದಿರದಲ್ಲಿ ಭಾನುವಾರ ಸಂಜೆ ಶ್ರೀ ದೇಗುಲ ವತಿಯಿಂದ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.
ಶಾಸಕ ಉಮಾನಾಥ ಎ.ಕೋಟ್ಯಾನ್ ಮಾತನಾಡಿ, ಅಧಿಕಾರ ದಾಹವಿಲ್ಲದ ಸರ್ವರನ್ನು ಸಮಾನವಾಗಿ ಕಾಣುತ್ತಾ ಉತ್ತಮ ಆಡಳಿತ ನೀಡಿದ ಮನೋಹರ ಶೆಟ್ಟಿ ಆದರ್ಶಪ್ರಾಯರು. ಅವರ ಅಗಲುವಿಕೆ ದುಃಖವನ್ನು ಸಹಿಸುವ ಶಕ್ತಿ ಶ್ರೀದುರ್ಗೆ ಅನುಗ್ರಹಿಸಲಿ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಸರಳ ಸಜ್ಜನಿಕೆ, ನೇರ ನಡೆನುಡಿಯ ಅವರು ಸಮಾಜಕ್ಕೆ ಆದರ್ಶಪ್ರಾಯರು. ಹಿರಿಯ ಸಹೋದರನಂತೆ ಸಾರ್ಥಕ ಬದುಕು ನಡೆಸಿದ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದರು.
ಕಸಾಪ ರಾಜ್ಯ ಪೂರ್ವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯೆ ಡಾ.ಮಲ್ಲಿಕಾ ಪಕ್ಕಳ, ಶ್ರೀ ದೇಗುಲ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಸಸಿಹಿತ್ಲು ಭಗವತಿ ದೇವಳ ಮುಖ್ಯ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಎಳತ್ತೂರು ದೇಗುಲ ಮೊಕ್ತೇಸರ ಸಂತೋಷ್ ಕುಮಾರ ಹೆಗ್ಡೆ, ಬಿಲ್ಲವ ಸಂಘ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಬಪ್ಪನಾಡು ದೇವಳ ಜೀರ್ಣೋದ್ಧಾರ ಸಮಿತಿ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಪತಂಜಲಿ ಯೋಗ ಸಮಿತಿ ರಾಜೇಶ್, ಭುವನಾಭಿರಾಮ ಉಡುಪ, ಗುರುವಪ್ಪ ಕೋಟ್ಯಾನ್, ಸುನೀಲ್ ಆಳ್ವ ನುಡಿನಮನ ಸಲ್ಲಿಸಿದರು.
ಅತ್ತೂರು ಬೈಲಮನೆ ವೆಂಕಟರಾಜ ಉಡುಪ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಪಾದೆಮನೆ ಜಯಂತ್ ರೈ, ಪ್ರಮುಖರಾದ ಕೊಲ್ನಾಡುಗುತ್ತು ಕಿರಣ್ ಶೆಟ್ಟಿ, ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ, ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್, ವಸಂತ ಬೆರ್ನಾಡ್, ಕಕ್ವಗುತ್ತು ಭಾನುಮತಿ ಶೆಟ್ಟಿ, ಶಮೀನಾ ಆಳ್ವ, ರಂಗನಾಥ ಶೆಟ್ಟಿ, ವೈ.ಎನ್.ಸಾಲ್ಯಾನ್, ಸಂಜೀವ ದೇವಾಡಿಗ, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ನಾಗೇಶ್ ಬಪ್ಪನಾಡು, ಶಿವಶಂಕರ್ ವರ್ಮ, ಮನೋಹರ ಶೆಟ್ಟಿ ಮಕ್ಕಳು, ಕುಟುಂಬಿಕರು ಉಪಸ್ಥಿತರಿದ್ದರು. ಈ ಸಂದರ್ಭ ಪುಷ್ಪನಮನ, ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಿವೃತ್ತ ಉಪನ್ಯಾಸಕ ಸಾಯಿನಾಥ್ ಶೆಟ್ಟಿ ನಿರ್ವಹಿಸಿದರು.