ಮೂಡುಬಿದಿರೆ ಗುರು ಬಸದಿಯಲ್ಲಿ ವಾರ್ಷಿಕ ಮಹೋತ್ಸವ

mbd_Guru Basadi
Published on

ಮೂಡುಬಿದಿರೆ: ಇಲ್ಲಿನ ಜೈನಪೇಟೆಯಲ್ಲಿರುವ ಗುರುಗಳ ಬಸದಿಯಲ್ಲಿ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯಿತು.

ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸಾರದ ತಾಪತ್ರಯ ದೂರ ಮಾಡುವ ಸರ್ವಜ್ಞ ದೇವರು. ಮಾನವ ಕಲ್ಲಿನಲ್ಲಿ ದೇವರ ಮಹಿಮೆ ಗುಣ ನೋಡಿ ತನ್ನಲ್ಲಿರುವ ಕಲ್ಮಶ ಭಾವ ತೊರೆದು ನಿಷ್ಕಲ್ಮಶವಾಗಬಹುದು ಎಂದರು.

ತೋರಣ ಮುಹೂರ್ತ, ತೀರ್ಥಂಕರರ ಅಭಿಷೇಕ, ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಷೋಡಶೋಪಾಚಾರ ಪೂಜೆ, ಕ್ಷೇತ್ರ ಪಾಲ ಪೂಜೆ, ನಾಗ ದೇವರ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಕಲಿಕುಂಡ ಆರಾಧನೆ ಶಂಭವ್ ಕುಮಾರ್ ರಾಜೇಶ್ವರಿ ದಂಪತಿ ನೆರವೇರಿಸಿದರು. ನಾಗೇಂದ್ರ ಪುರೋಹಿತ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬಸದಿಗಳ ಮೊಕ್ತೇಸರ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಕೊಂಡೆಮನೆತನ, ಮಂಜುಳಾ ಅಭಯ ಚಂದ್ರ, ಶ್ರೀನಾಥ್ ಬಲ್ಲಾಳ್, ವೀರೇಂದ್ರ ಜೈನ್, ಬಾಹುಬಲಿ ಪ್ರಸಾದ್, ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net