"ಪಂಚ ಗ್ಯಾರಂಟಿ' ವೈಭವ

Raghu_15_79th_Independence_Day_@_Manekshaw_Parade_Grounds (42)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ, ಬಾವುಟ ಇತ್ಯಾದಿ ಮೈಮೇಲೆ ವೈವಿದ್ಯಮಯ ವಸ್ತುಗಳು, ಪುಟ್ಟ ಪುಟ್ಟ ಆರ್ಮಿ, ಪೊಲೀಸ್​ ಸಮವಸ್ತ್ರಗಳನ್ನು ಧರಿಸಿದ ಮಕ್ಕಳು, "ಭಾರತ್​ ಮಾತಾಕಿ ಜೈ', "ವಂದೇ ಮಾತರಂ' ಎಂಬ ಘೋಷಣೆಗಳು, ಶಿಸ್ತುಬದ್ಧ ಪಥ ಸಂಚಲನ, ಹುಬ್ಬೇರಿಸಿ ಆಕರ್ಷಿಸುವಂತಹ ಮಕ್ಕಳ ಸಾಂಸತಿಕ ಕಾರ್ಯಕ್ರಮಗಳು... ನಗರದ ಮಾಣೆಕ್​ ಷಾ ಮೈದಾನದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಕಂಡುಬಂದ ದೃಶ್ಯಗಳಿವು.

ನಗರದ ವಿವಿಧ ಶಾಲೆಗಳ ಸಾವಿರಾರು ಮಕ್ಕಳು ಉತ್ಸಾಹದಿಂದ ಬಿಳಿ ವಸ್ತ್ರ ಧರಿಸಿ ಸ್ವಾತಂತ್ರ್ಯೋತ್ಸವ ಆರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಅದರಂತೆಯೇ ಸಾಂಸತಿಕ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸುವ ಮೂಲಕ ಸಂಭ್ರಮ ಹೆಚ್ಚಿಸಿದ್ದಾರೆ.

ಆಕರ್ಷಕ ಪಥ ಸಂಚಲನ ನೀಡಿ ಮತ್ತು ಸಾಂಸತಿಕ ಕಾರ್ಯಕ್ರಮದಲ್ಲಿ ಬಹುಮಾನ ಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಣೆ ಮಾಡಿದರು. ಸಾವಿರಾರು ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷ.

ತೆರೆದ ಜೀಪ್​ನಲ್ಲಿ ಪರೇಡ್​ ಪರಿವೀಕ್ಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ತೆರೆದ ಜೀಪ್​ನಲ್ಲಿ ಪರೇಡ್​ ಪರಿವೀಕ್ಷಣೆ ನಡೆಸಿದರು. ಅದಾದ ನಂತರ ಕೆಎಸ್​ಆರ್​ಪಿ, ಸಿಆರ್​ಪಿಎಫ್​, ಬಿಎಸ್​ಎಫ್​, ಎನ್​ಸಿಸಿ, ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಶ್ವಾನದಳ, ಆರ್ಮಿ ಪಬ್ಲಿಕ್​ ಸ್ಕೂಲ್​, ಪೊಲೀಸ್​ ಪಬ್ಲಿಕ್​ ಸ್ಕೂಲ್​ ಸೇರಿ ವಿವಿಧ ಇಲಾಖೆಯ 35 ತುಕಡಿಗಳಿಂದ ಶಿಸ್ತುಬದ್ಧ ಪಥ ಸಂಚಲನ ನಡೆಯಿತು.

ಮೈನವಿರೇಳಿಸಿದ "ಗ್ಯಾರಂಟಿ' ನೃತ್ಯ

ರಾಜ್ಯ ಸರ್ಕಾರದ ಮಹತ್ವಾಕಾಂ ಯೋಜನೆಯಾಗಿರುವ "ಪಂಚ ಗ್ಯಾರಂಟಿ'ಗಳ ಕುರಿತಾಗಿ ಕರ್ನಾಟಕ ಪಬ್ಲಿಕ್​ ಸ್ಕೂಲ್​ ಹಾಗೂ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಶೇಷ ನೃತ್ಯ ಪ್ರದರ್ಶನ ನೋಡುಗರನ್ನು ಮಂತ್ರಮುಗ್ಧ ಗೊಳಿಸಿತು.

ಸುಮಾರು 450 ವಿದ್ಯಾರ್ಥಿಗಳು ಈ ನೃತ್ಯದಲ್ಲಿ ಹೆಜ್ಜೆ ಹಾಕಿದ್ದಾರೆ. ಗೃಹಲಕ್ಷಿ$್ಮ, ಗೃಹಜ್ಯೋತಿ, ಯುವನಿಧಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವಾಗುತ್ತಿರುವ ಅಂಶಗಳನ್ನು ಪ್ರಸ್ತುತಪಡಿಸಲಾಯಿತು. ಕರ್ನಾಟಕ ಪೊಲೀಸರ 253 ಸದಸ್ಯರು ಸಾಮೂಹಿಕ ಬ್ಯಾಂಡ್​ನಲ್ಲಿ ಭಾಗವಹಿಸಿದರು.

ಜತೆಗೆ ಹೆಜ್ಜೆ ಹಾಕಿದ 650 ವಿದ್ಯಾರ್ಥಿಗಳು!

ಬೆಂಗಳೂರು ಮಹಾ ನಗರ ಪಾಲಿಕೆ ವತಿಯಿಂದ "ಸ್ವಾತಂತ್ರ$್ಯ ಸಂಗ್ರಾಮದ ವೀರ ಕನ್ನಡತಿಯರು' ಎಂಬ ನೃತ್ಯ ರೂಪಕವು ಸಭಿಕರ ಗಮನ ಸೆಳೆದಿದ್ದು, ಅದರಲ್ಲಿ ಬಳ್ಳಾರಿಯ ಸಿದ್ದಮ್ಮ ಅವರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸುವ ಮೂಲಕ ಮುಂದಿನ ಪೀಳಿಗೆಗೂ ಬಳ್ಳಾರಿಯ ಸಿದ್ದಮ್ಮ ಅವರ ಕೊಡುಗೆಗಳನ್ನು ಸ್ಮರಿಸುವಂತೆ ಮಾಡಿದೆ. ಬರೋಬ್ಬರಿ 650 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ನಗರಾಭಿವೃದ್ಧಿಗೆ ಒತ್ತು

ಬೆಂಗಳೂರು ನಗರಾಭಿವೃದ್ಧಿಗಾಗಿ ಸುಮಾರು 1.35 ಲಕ್ಷ ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಡಬಲ್​ ಡೆಕರ್​ ರಸ್ತೆಗಳು, ಸುರಂಗ ರಸ್ತೆಗಳು, ಬೆಂಗಳೂರು ಬ್ಯುಸಿನೆಸ್​ ಕಾರಿಡಾರ್​, ವೈಟ್​ ಟಾಪಿಂಗ್​ ರಸ್ತೆಗಳು, ಡಾಂಬರು ರಸ್ತೆಗಳು, 6ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆ, ಹೊಸ ಮೆಟ್ರೋ ರೈಲು ಮಾರ್ಗಗಳು, ಬಫರ್​ ರಸ್ತೆ, ಮೇಲ್ಸೇತುವೆ, ಉತ್ತರ-&ದಕ್ಷಿಣ ಕಾರಿಡಾರ್​, ಪೂರ್ವ-ಪಶ್ಚಿಮ ಕಾರಿಡಾರ್​, ಉದ್ಯಾನಗಳ ಅಭಿವೃದ್ಧಿ, ಸಾರ್ವಜನಿಕ ಪಾರ್ಕಿಂಗ್​ ವ್ಯವಸ್ಥೆ, ಶಿಕ್ಷಣ- ಆರೋಗ್ಯ ವ್ಯವಸ್ಥೆಯ ಸುಧಾರಣೆ, ಟ್ರಾಫಿಕ್​ ನಿರ್ವಹಣೆ, ಆಟದ ಮೈದಾನಗಳು ಇತ್ಯಾದಿ ಯೋಜನೆಗಳಲ್ಲಿ ಕೆಲವು ಚಾಲನೆಗೊಂಡಿದ್ದು, ಉಳಿದಂತೆ ಪ್ರಾಥಮಿಕ ಹಂತದಲ್ಲಿವೆ. ಜಿಬಿಎ ವ್ಯಾಪ್ತಿಯಲ್ಲಿ ಇ-&ಖಾತಾ ವ್ಯವಸ್ಥೆಯು ನಾಗರಿಕರಿಗೆ ಆನ್​ಲೈನ್​ ಮೂಲಕ ಡಿಜಿಟಲೈಸ್ಡ ಆಸ್ತಿ ದಾಖಲೆಗಳನ್ನು ಒದಗಿಸುತ್ತದೆ. ಬಿ&-ಖಾತಾ ಗೊಂದಲಗಳನ್ನು ಬಗೆಹರಿಸಿ ಎ&-ಖಾತಾ ಕೊಡಲು ತೀಮಾರ್ನಿಸಿರುವುದು ಜನರಿಗೆ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಪಥ ಸಂಚಲನದಲ್ಲಿ ಬಹುಮಾನ ವಿವರ

ಗ್ರೂಪ್​-1 ವಿಭಾಗದಲ್ಲಿ ಬಿಎಫ್​ ತಂಡಕ್ಕೆ ಪ್ರಥಮ, ಕೆಎಎಸ್​ಆರ್​ಪಿಎಫ್​ (ಪುರುಷರು) ದ್ವೀತಿಯ ಹಾಗೂ ನಗರ ಶಸ್ತ್ರಪಡೆ ತೃತೀಯ ಬಹುಮಾನ ಪಡೆದಿದೆ. ಕೆಎಎಸ್​ಆರ್​ಪಿಎಫ್​ (ಮಹಿಳಾ) ತಂಡಕ್ಕೆ ವಿಶೇಷ ಬಹುಮಾನ ನೀಡಲಾಯಿತು.

ಇದೇ ಕ್ರಮವಾಗಿ ಗ್ರೂಪ್​-2 ವಿಭಾಗದಲ್ಲಿ ಎನ್​ಸಿಸಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ತಂಡ, ಗ್ರೂಪ್​-&3&ಸಿವಿಲ್​ ಡಿಫೆನ್ಸ್​, ಟ್ರಾಫಿಕ್​, ಗ್ರೂಪ್​-&4&ಅರಕೆರೆ ಮಿತ್ರ ಅಕಾಡೆಮಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಗ್ರೂಪ್​-&5 ಯಶವಂತಪುರದ ಬಾಪೂ ಹೈಸ್ಕೂಲ್​, ಗವರ್ನ್​ಮೆಂಟ್​ ಮೋಡೆಲ್​ ಪೆಮರಿ ಸ್ಕೂಲ್​, ಗ್ರೂಪ್​-&6 ಕೋರಮಂಗಲದ ಪೊಲೀಸ್​ ಪಬಿಕ್​ ಶಾಲೆ, ಭಾರತ್​ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​, ಬ್ಯಾಂಡ್​ ಗ್ರೂಪ್​ನಲ್ಲಿ ಎನ್​ಸಿಸಿ ಹಾಗೂ ಪ್ರೆಸಿಡೆನ್ಸಿ ಸ್ಕೂಲ್​ ನಂದಿನಿ ಲೇಔಟ್​ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್​ ಅವರು ಬಹುಮಾನ ವಿತರಿಸಿದರು.

ಪೆರೇಡ್​ನಲ್ಲಿ ಭಾಗವಹಿಸಿದ ಗೋವಾ ರಾಜ್ಯದ ಪೊಲೀಸ್​ ತಂಡ, ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್​ ಮಕ್ಕಳ ವಸತಿ ಶಾಲೆ, ಶ್ವಾನದಳ, ಸಮರ್ಥನಂ ಹಾಗೂ ರಮಣಶ್ರೀ ಅಂದ ಮಕ್ಕಳ ತಂಡಕ್ಕೆ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಂಸತಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ಪ್ರದರ್ಶನಕ್ಕೆ ಪ್ರಥಮ, ಬಿಬಿಎಂಪಿಯ ಕಾರ್ಯಕ್ರಮಕ್ಕೆ ದ್ವೀತಿಯ ಬಹುಮಾನ ಲಭಿಸಿದೆ. ಪೆರೇಡ್​ ಕಮಾಂಡರ್​ಗಳಾದ ಎ.ನಾಗರಾಜ್​ ಹಾಗೂ ನಿಖಿಲ್​ ಕುಮಾರ್​ ಅವರಿಗೂ ಗೌರವ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net