ಕಿನ್ನಿಗೋಳಿಯಲ್ಲಿ ಘಮಘಮಿಸಿದ ಮಾವು, ಹಲಸು : ಸಾವಯವ ಉತ್ಪನ್ನಗಳತ್ತ ಗ್ರಾಹಕರ ಒಲವು

mango, jackfruit
ಕಿನ್ನಿಗೋಳಿಯಲ್ಲಿ ಮಾವು ಹಲಸು ಮೇಳ ಸಾವಯನ ಉತ್ಪನ್ನಗಳ ಮಾರಾಟ ಮೇಳ
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಕಿನ್ನಿಗೋಳಿಯ ರಾಜರತ್ನಪುರದ ಸರಾಫ್ ಅಣ್ಣಯ್ಯಚಾರ್ಯ ಸಭಾಭವನದಲ್ಲಿ ಭಾನುವಾರ ಮೂಲ್ಕಿ ತಾಲೂಕಿನಲ್ಲಿ ಎರಡನೇ ಬಾರಿಗೆ ಮಾವು ಹಲಸು ಮೇಳ ಸಾವಯವ ಉತ್ಪನ್ನಗಳ ಮಾರಾಟ ಮೇಳ ನಡೆಯಿತು. ಕಾಷ್ಟ ಶಿಲ್ಪಿ ಮಾಧವ ಆಚಾರ್ಯ ಬಲವಿನಗುಡ್ಡೆ ಹಾಗೂ ಅನಂತ ಪ್ರಕಾಶದ ಸಚ್ಚಿದಾನಂದ ಉಡುಪ ಹಲಸು ಮೇಳಕ್ಕೆ ಚಾಲನೆ ನೀಡಿದರು.

ಮೂಲ್ಕಿ ತಾಲೂಕು ಕೃಷಿ ಸಂಘದ ಅಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ಸರಾಪ್ ಅಣ್ಯಯ್ಯ ಆಚಾರ್ಯ ಸಭಾಭವನ ಸಮಿತಿಯ ಪೃಥ್ವಿರಾಜ್ ಆಚಾರ್ಯ, ಮಂಗಳೂರು ಸಾವಯವ ಕೃಷಿಯ ರತ್ನಾಕರ್, ಸಜ್ಜನ ಬಂಧುಗಳ ಸಂಘಟನೆಯ ದಾಮೋದರ ಶೆಟ್ಟಿ, ಪ್ರಕಾಶ್ ಆಚಾರ್ಯ, ವಿಶ್ವಬ್ರಾಹ್ಮಣ ಸಂಘದ ಯೋಗೀಶ್ ಆಚಾರ್ಯ, ಮಹಿಳಾ ಶಶಿಕಲಾ ಯೋಗೀಶ್, ಯೋಗೀಶ್ ಆಚಾರ್ಯ ಮಿತ್ತಬೈಲು, ದಿನೇಶ್ ಆಚಾರ್ಯ, ಅಂಚೆ ಇಲಾಖೆಯ ರಾಮಚಂದ್ರ ಕಾಮತ್, ಧನಂಜಯ ಐಗಳ್, ಪ್ರಭಾಕರ ಆಚಾರ್ಯ, ಶಶಿಕಲಾ ಆಚಾರ್ಯ, ಅನಿತಾ ಪೃಥ್ವಿರಾಜ ಆಚಾರ್ಯ, ಸುಧಾಕರ ಆಚಾರ್ಯ, ಜಗದೀಶ ಆಚಾರ್ಯ ಸುರಗಿರಿ, ಸ್ವಸ್ತಿಕ್ ಆಚಾರ್ಯ, ಪ್ರಕಾಶ್ ಆಚಾರ್, ರಂಜನ್ ಕುಮಾರ್, ರತ್ನಾ ಪ್ರಭಾಕರ ಆಚಾರ್ಯ, ಸಂಘಟಕ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಿಥುನ್ ಕೊಡೆತ್ತೂರು, ವೀಣಾ ಹರೀಶ್, ಹರೀಶ್ ಕೋಟ್ಯಾನ್ ಮತ್ತಿತತರು ಉಪಸ್ಥಿರಿದ್ದರು.

ಗ್ರಾಹಕರಿಂದ ಭಾರಿ ಡಿಮ್ಯಾಂಡ್

ವಿವಿಧ ಬಗೆಯ ಹಲಸು, ಮಾವು ಪ್ರದರ್ಶನ, ಮಾರಾಟ, ಹಲಸು- ಮಾವು ಹೋಳಿಗೆ, ಐಸ್ ಕ್ರೀಂ ಇತ್ಯಾದಿ ಖಾದ್ಯಗಳು, ಗಿಡಗಳ ಮಾರಾಟ, ದೇಶೀಯ ತರಕಾರಿ ಬೀಜಗಳ ಮಾರಾಟ, ಸಾವಯವ ಉತ್ಪನ್ನಗಳ ಮಾರಾಟ ನಡೆಯಿತು. ಬಿಜಾಪುರ, ದೊಡ್ಡಬಳ್ಳಾಪುರದಿಂದ ಕೃಷಿಕರು ಬಂದಿದ್ದರು. ತರಕಾರಿ ಬೀಜಗಳು ಹೆಚ್ಚು ಮಾರಾಟವಾಗಿವೆ. ಸ್ಟಾಲಿನಲ್ಲಿ ತಂದ ಒಂದು ಲೋಡ್ ಮಾವು ಎಲ್ಲ ಖಾಲಿ ಖಾಲಿ. ಹಲವು ಹೋಳಿಗೆ, ಬೊಂಡಾಕ್ಕೆ ತುಂಬಾ ಡಿಮ್ಯಾಂಡ್ ಬಂತು.

ಕೃಷಿಕರಿಂದ ನೇರವಾಗಿ ಗ್ರಾಹಕರಿಗೆ ಸಿಗುವ ವ್ಯವಸ್ಥೆ, ಪೇಟೆಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಮಾವು ಹಲಸು ಮೇಳದ ಆಯೋಜನೆ ಅಭಿನಂದನೀಯ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು. ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಹಕಾರ ನೀಡಬೇಕು.-ಸಚ್ಚಿದಾನಂದ ಉಡುಪ ಕೊಡೆತ್ತೂರು https://www.vijayavani.net/kudi-muhurta-program-for-lavakusha-jodukare-kambalotsava

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net