ಮಂಗಳೂರು ವಿ.ವಿ. ಕನಕ ಕೀರ್ತನ ಗಂಗೋತ್ರಿ

Ull_Kanaka
Published on

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ಕನಕ ಕೀರ್ತನ ಗಂಗೋತ್ರಿ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ 19 ಗಾಯಕರು ಮತ್ತು ಮೂರು ತಂಡಗಳು 2024-25ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಒಟ್ಟು 173 ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ಡಾ.ಶ್ರೀಕೃಷ್ಣ ಭಟ್ಟ ಸುಣ್ಣಗುಳಿ, ಬೊಳುವಾರು ರಮಾ ಪ್ರಭಾಕರ್, ಮಂಜುಳಾ ಸುಬ್ರಹ್ಮಣ್ಯ, ಡಾ.ಸುಚಿತ್ರಾ ಹೊಳ್ಳ ಮತ್ತು ಸಂಧ್ಯಾ ಸತ್ಯನಾರಾಯಣ ಉಪಸ್ಥಿತರಿದ್ದರು.

ಕನಕ ಪುರಸ್ಕಾರ ಸ್ಮರಣಿಕೆ, ಪ್ರಮಾಣ ಪತ್ರ ಮತ್ತು 2000 ನಗದು ಬಹುಮಾನ ಹೊಂದಿದೆ. ಜನವರಿ ತಿಂಗಳಲ್ಲಿ ನಡೆಯುವ ಕನಕಸ್ಮತಿ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುವುದು ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಪ್ರೌಢ ಶಾಲಾ ವಿಭಾಗ:

ಪ್ರದಯ್ಯ ಶೆಣೈ (ಕೆನರಾ ಸಿಬಿಎಸ್‌ಇ ಸ್ಕೂಲ್, ಡೊಂಗರಕೆರೆ, ಮಂಗಳೂರು), ವರ್ಷಿಣಿ ಎಲ್.ಕರ್ಕೇರ (ಸಾಗರ್ ವಿದ್ಯಾಮಂದಿರ, ಪಡುಬಿದ್ರೆ), ನಿನಾದ ಕೆ. (ಶಾರದಾ ವಿದ್ಯಾಲಯ ಕೊಡಿಯಾಲ್‌ಬೈಲ್), ಜಗತ್ (ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ.)

ಪದವಿಪೂರ್ವ ವಿಭಾಗ:

ಆರ್.ಪ್ರತೀಕ್ಷಾ (ಕೆನರಾ ಕಾಲೇಜು, ಮಂಗಳೂರು), ಆತ್ಮಶ್ರೀ (ಅಂಬಿಕಾ ಪದವಿಪೂರ್ವ ವಿದ್ಯಾಲಯ ಪುತ್ತೂರು), ಪುನೀತ್ ಆರ್.ತೊಕ್ಕೊಟ್ಟು (ಭಾರತ್ ಪಿಯು ಕಾಲೇಜು ಉಳ್ಳಾಲ).

ಪದವಿ ವಿಭಾಗ:

ದೀಪ್ತಿ ಪ್ರಭು (ವಿವೇಕಾನಂದ ಕಾಲೇಜು ಆಫ್ ಆಟ್ಸ್ ಸೈನ್ಸ್ ಆ್ಯಂಡ್ ಕಾಮರ್ಸ್ (ಸ್ವಾಯತ್ತ ಪುತ್ತೂರು), ತನ್ಮಯಿ ಯು.(ವಿವೇಕಾನಂದ ಕಾಲೇಜು ಆಪ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪುತ್ತೂರು), ಶ್ರೀಲಯ (ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ)

ಸ್ನಾತಕೋತ್ತರ ವಿಭಾಗ:

ಪ್ರಜ್ವಲ್ (ಮಂಗಳೂರು ವಿ.ವಿ.), ಮೇಧಾ ಎನ್. (ಮಂಗಳೂರು ವಿ.ವಿ.), ಮಹೇಂದ್ರ ಶೆಟ್ಟಿ (ಮಂಗಳೂರು ವಿ.ವಿ.)

ಅಧ್ಯಾಪಕ ವಿಭಾಗ:

ಸ್ವಾತಿ ಎನ್.ಎಸ್.(ಜಿ.ಎಫ್.ಜಿ.ಸಿ. ಉಪ್ಪಿನಂಗಡಿ), ಅಶ್ವಿನಿ ಸುವರ್ಣ (ಸರ್ಕಾರಿ ಪದವಿಪೂರ್ವ ಕಾಲೇಜು, ಪಡುಬಿದ್ರಿ), ಕೆಂಚನಗೌಡ ಪಾಟೀಲ್ (ಶಾರದಾ ವಿದ್ಯಾನಿಕೇತನ್ ಪಿ.ಯು. ಕಾಲೇಜು ತಲಪಾಡಿ)

ಅಧ್ಯಾಪಕೇತರ ವಿಭಾಗ:

ರವಿದಾಸ ಕಾರ್ಕಳ (ಭುವನೇಂದ್ರ ಪದವಿ ಕಾಲೇಜು ಕಾರ್ಕಳ), ಕವಿತಾ (ಸಿಂಡಿಕೇಟ್ ವಿಭಾಗ, ಮಂಗಳೂರು ವಿ.ವಿ.), ಶರಾವತಿ (ಮಹಿಳಾ ಅಧ್ಯಯನ ಕೇಂದ್ರ ಮಂಗಳೂರು ವಿ.ವಿ.)

ಸಾರ್ವಜನಿಕ ವಿಭಾಗ:

ಬಂಟರ ಬಳಗ (ಜಪ್ಪಿನ ಮೊಗರು), ಸಪ್ತಸ್ವರ ಕಲಾಕೇಂದ್ರ (ಕೊಣಾಜೆ), ಅಭಿಮನ್ಯು ತಂಡ (ಮಂಗಳೂರು ವಿ.ವಿ., ಹಂಪನಕಟ್ಟೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net