

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ತುಳು ಆಚರಣೆಗಳಲ್ಲಿ ಬರೀ ನಂಬಿಕೆಗಳಲ್ಲ ಇತಿಹಾಸವೂ ಇದೆ, ವಿಜ್ಞಾನವೂ ಇದೆ ಎಂಬುದು ಪ್ರಸರಣಗೊಳ್ಳಬೇಕು. ತುಳು ತೃತೀಯ ಭಾಷಾ ಅನುಷ್ಠಾನ ಮತ್ತು ತುಳು ಲಿಪಿ ಅಧ್ಯಯನಕ್ಕೆ ಕಟೀಲು ಶಿಕ್ಷಣ ಸಂಸ್ಥೆಗಳಲ್ಲಿ ನೀಡಿರುವ ಆದ್ಯತೆ ಮತ್ತು ಅವಕಾಶ ಸ್ವಾಗತಾರ್ಹ ಎಂದು ತುಳು-ಕನ್ನಡ ಸಾಹಿತಿ ಡಾ.ವಿ.ಕೆ.ಯಾದವ್ ಸಸಿಹಿತ್ಲು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ 4ನೇ ವರ್ಷದ ‘ಭ್ರಮರ ಇಂಚರ’ ನುಡಿಹಬ್ಬ ಸಮ್ಮೇಳನದ 2ನೇ ದಿನದ ಭಾಷೆಯ ಸೊಗಡು ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ರಾಧ್ಯಾಪಕ ಅವಿನಾಶ್ ಕೊಡಂಕಿರಿ, ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ, ಮನೋಜ್ ಶೆಟ್ಟಿ ಬೆಂಗಳೂರು, ಸಿ.ಎ.ರಾಘವೇಂದ್ರ ನಾಯಕ್, ಸತ್ಯರಂಜನ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ತುಳು ಗೋಷ್ಠಿಯ ವೇದಿಕೆಯನ್ನು ಪಡಿಮಂಚವು, ಅರಿತ್ತ ಮುಡಿ, ಕಲಸ್, ಮಂಡೆ(ಗುರ್ಕೆ), ಕಲಸೆ, ಭರಣಿ, ಕೂಜಿ ಮುಂತಾದ ವಸ್ತುಗಳನ್ನಿರಿಸಿ ವಿನ್ಯಾಸಗೊಳಿಸಲಾಗಿದೆ.
ಸಮೃದ್ಧವಾಗಿರುವ ತುಳು ಭಾಷೆ, ಸಂಸ್ಕೃತಿ, ಸಾಹಿತ್ಯದ ಪರಿಚಯ ಮುಂದಿನ ತಲೆಮಾರಿಗೆ ಮುಂದುವರಿಯಬೇಕಾದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ತುಳುವಿನ ಅನುಷ್ಠಾನವನ್ನು ಇನ್ನಷ್ಟು ಬಲಪಡಿಸಿ ವಿಸ್ತಾರಗೊಳಿಸುವ ಅನಿವಾರ್ಯತೆ ಇದೆ. ತುಳುವಿನ ಸಮಗ್ರತೆಯ ಸಾರಾಂಶವಾಗಿ ಪಠ್ಯಗಳು ರೂಪಿತವಾಗಿವೆ. - ಡಾ.ವಿ.ಕೆ.ಯಾದವ್, ತುಳು-ಕನ್ನಡ ಸಾಹಿತಿ https://www.vijayavani.net/shasta-of-sahkti-school https://www.vijayavani.net/msnim-a-grade