ಮೇಲುಕೋಟೆಯಲ್ಲಿ ತಿರುಪವಿತ್ರೋತ್ಸವ ಸಂಪನ್ನ

ಚೆಲುವನಾರಾಯಣಸ್ವಾಮಿಗೆ ಗರುಡವಾಹನೋತ್ಸವ ಸಡಗರ
ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ತಿರುಪವಿತ್ರೋತ್ಸವದ ಅಂಗವಾಗಿ ಸೋಮವಾರ ಗರುಡವಾಹನೋತ್ಸವ ವೈಭವದಿಂದ ನೆರವೇರಿತು.
ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ತಿರುಪವಿತ್ರೋತ್ಸವದ ಅಂಗವಾಗಿ ಸೋಮವಾರ ಗರುಡವಾಹನೋತ್ಸವ ವೈಭವದಿಂದ ನೆರವೇರಿತು.
Published on: 

ಮೇಲುಕೋಟೆ: ಇಲ್ಲಿನ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಗರುಡವಾಹನೋತ್ಸವ ನೆರವೇರುವುದರೊಂದಿಗೆ ಕಳೆದ ಒಂದುವಾರದಿಂದ ನಡೆಯುತ್ತಿದ್ದ ತಿರುಪವಿತ್ರೋತ್ಸವ ಸೋಮವಾರ ಸಂಪನ್ನಗೊಂಡಿತು.

ಪವಿತ್ರೋತ್ಸವದ ಶಾತ್ತುಮೊರೆಯ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಗರುಡವಾಹನೋತ್ಸವ ಸಡಗರ ಉತ್ಸವ ಬೀದಿಗಳಲ್ಲಿ ನೆರವೇರಿತು. ಸಂಜೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೋಷ ಪರಿಹಾರಕ್ಕಾಗಿ ಪ್ರಾರ್ಥಿಸಿ ಚೆಲುವನಾರಾಯಣಸ್ವಾಮಿ, ಯೋಗನರಸಿಂಹಸ್ವಾಮಿ, ರಾಮಾನುಜರಿಗೆ ಧರಿಸಿದ್ದ ರೇಷ್ಮೆಯಿಂದ ಮಾಡಿದ ಪವಿತ್ರ ಹಾರಗಳನ್ನು ತೆಗೆದು ಭಕ್ತರಿಗೆ ದೇವಾಲಯದ ಕೈಂಕರ್ಯಪರರಿಗೆ ಪ್ರಸಾದವಾಗಿ ನೀಡಲಾಯಿತು. ಸ್ವಾಮಿಗೆ ಚಂದ್ರಮಂಡಲ, ಶೇಷವಾಹನ, ಅಶ್ವ, ಗಜ ಗರುಡ ವಾಹನಗಳು ಸಂಜೆ ವಿಶೇಷ ಉತ್ಸವಗಳು ದಿವ್ಯಪ್ರಬಂಧ, ವೇದ ಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ಜಗುರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net