ಪಶು ಚಿಕಿತ್ಸಾಲಯ ಬೇಕೆನ್ನುವ ಬೇಡಿಕೆ ಈಡೇರಿಸಲಾಗಿದೆ

ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ
 ಶ್ರೀರಂಗಪಟ್ಟಣ ತಾಲೂಕಿನ ನೇರಳಕೆರೆ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಪಶು ಚಿಕಿತ್ಸಾಲಯವನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಡಾ. ರಾಮಚಂದ್ರ, ಡಾ. ಪ್ರವೀಣ್, ಪಟೇಲ್, ಸುರೇಶ್, ರಮೇಶ್, ಮಹೇಶ್, ಹರಿಪ್ರಸಾದ್ ಇತರರಿದ್ದರು.
ಶ್ರೀರಂಗಪಟ್ಟಣ ತಾಲೂಕಿನ ನೇರಳಕೆರೆ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಪಶು ಚಿಕಿತ್ಸಾಲಯವನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಡಾ. ರಾಮಚಂದ್ರ, ಡಾ. ಪ್ರವೀಣ್, ಪಟೇಲ್, ಸುರೇಶ್, ರಮೇಶ್, ಮಹೇಶ್, ಹರಿಪ್ರಸಾದ್ ಇತರರಿದ್ದರು.
Published on: 

ಶ್ರೀರಂಗಪಟ್ಟಣ: ತಾಲೂಕಿನ ನೇರಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪಶು ವೈದ್ಯಕೀಯ ಚಿಕಿತ್ಸಾಲಯವನ್ನ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಗ್ರಾಮದಲ್ಲಿ ದಿನನಿತ್ಯ ಸುಮಾರು ಒಂದೂವರೆಯಿಂದ ಎರಡು ಸಾವಿರ ಲೀಟರ್ ಹಾಲು ಉತ್ಪಾದಿಸತ್ತಿದ್ದು, ಈ ಗ್ರಾಮಕ್ಕೆ ಪಶುವೈದ್ಯಕೀಯ ಚಿಕಿತ್ಸಾಲಯ ತೆರೆಯಬೇಕೆಂಬ ನನ್ನ ಆಸೆ ಮತ್ತು ಗ್ರಾಮಸ್ಥರು ಕೂಗನ್ನ ಈಡೇರಿಸಿದ್ದೇನೆ. ಹಲವಾರು ವರ್ಷಗಳಿಂದ ಪಶು ಚಿಕಿತ್ಸಾಲಯದ ಕಟ್ಟಡ ಇಲ್ಲದ ಕಾರಣ ರೋಗದಿಂದ ಬಳಲುತ್ತಿದ್ದ ಮೂಕ ಪ್ರಾಣಿಗಳನ್ನು ದೂರದ ಗ್ರಾಮಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಬೇಕಾಗಿತ್ತು. ಈ ಸಂಬಂಧ ಗ್ರಾಮದ ಮುಖಂಡರು ಕಳೆದ 30 ವರ್ಷಗಳಿಂದ ಈ ಬೇಡಿಕೆ ಸಲ್ಲಿಸಿದ್ದರು. ಇದೀಗ ಪಶು ಚಿಕಿತ್ಸಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಸರ್ಕಾರ ಹಾಲಿನ ದರ 8 ರೂ. ಹೆಚ್ಚಳ ಮಾಡಿದೆ. ಇದರಿಂದ ರೈತರಿಗೆ 1 ಲೀಟರ್ ಹಾಲಿಗೆ ಕನಿಷ್ಠ 48 ರೂ. ಸಿಗಲಿದೆ. ಇನ್ನು ಮುಂದೆ ನಿಮ್ಮ ಗ್ರಾಮದಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ಕೊಡಲು ವೈದ್ಯಾಧಿಕಾರಿಗಳು ಯಾವಾಗಲೂ ಸಿದ್ಧರಿರುತ್ತಾರೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹಾಲು ಉತ್ಪಾದಕರಿಗೆ ತಿಳಿಸಿದರು.

ಮಳೆಯಾಶ್ರಿತ ಗ್ರಾಮವಾದ್ದರಿಂದ ಈವರೆಗೆ ಬೋರ್‌ವೆಲ್ ಮೂಲಕ ನೀರನ್ನು ಶುದ್ಧೀಕರಿಸಿ ನೀಡಲಾಗುತ್ತಿತ್ತು, ಕಾವೇರಿ ಶುದ್ಧ ಕುಡಿಯುವ ನೀರು ನೀಡಲು ಕಾವೇರಿ ಬೋರೇದೇವರ ದೇವಸ್ಥಾನದ ಬಳಿ ಜಮೀನನ್ನು ಖರೀದಿಸಲಾಗಿದ್ದು, ಅಲ್ಲಿಂದ ಮೋಟಾರುಗಳಿಂದ ನೀರನ್ನು ಶುದ್ಧೀಕರಿಸಿ ಪೈಪ್‌ಲೈನ್ ಮುಖಾಂತರ ಗ್ರಾಮಕ್ಕೆ ಶುದ್ಧ ನೀರು ಕೊಡಲು ಈಗಾಗಲೇ ಕೆಲಸ ಆರಂಭವಾಗಿದೆ. ಇನ್ನು ಐದು ತಿಂಗಳಲ್ಲಿ ಗ್ರಾಮಕ್ಕೆ ಕಾವೇರಿ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ರಾಮಚಂದ್ರ, ಸಹಾಯಕ ನಿರ್ದೇಶಕ ಡಾ. ಪ್ರವೀಣ್, ಗ್ರಾಮದ ಮುಖಂಡರಾದ ಪಟೇಲ್ ಸುರೇಶ್, ರಮೇಶ್, ಮಹೇಶ್, ಹರಿಪ್ರಸಾದ್, ನಾಗೇಶ್, ಚಂದ್ರು, ಎಂ.ಪಿ.ಸುರೇಶ್, ನಿಂಗೇಗೌಡ, ಪಶುವೈದ್ಯಾಧಿಕಾರಿಗಳಾದ ಡಾ. ರಾಘವೇಂದ್ರ, ಡಾ. ದರ್ಶನ್, ಡಾ. ಪ್ರದೀಪ್ ಸೇರಿದಂತೆ ಇತರರು ಇದ್ದರು.