

ಕೆ.ಆರ್.ಸಾಗರ: ವಿದ್ಯಾರ್ಥಿಗಳು ಉತ್ತಮವಾದ ಧೈರ್ಯ ಹೊಂದಿದಾಗ ಮಾತ್ರ ಗುರಿಮುಟ್ಟಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಸಿರಿಯಾಕ್ ಜೋಸೆಫ್ ಹೇಳಿದರು.
ಇಲ್ಲಿನ ಬಸ್ತಿಪುರ ಗ್ರಾಮದ ಬಳಿ ಇರುವ ಡಿ ಪಾಲ್ ಕಾನೂನು ಕಾಲೇಜು ಸಮ್ಮುಚ್ಛಯವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆ ಸತ್ಯ, ನ್ಯಾಯ, ಪ್ರಾಮಾಣಿಕತೆ ಮತ್ತು ಪರಸ್ಪರ ಸಹಾಯ ಮಾಡುವ ಮೌಲ್ಯಗಳನ್ನು ಅಳವಡಿಕೊಳ್ಳಬೇಕು. ಶಿಕ್ಷಣದಲ್ಲಿ ಯಾವುದೇ ಜಾತಿ-ಜನಾಂಗದ ಬೇಧ, ಭಾವಗಳು ಇರಬಾರದು. ಎಲ್ಲರೂ ಸಮುನಾಗಿರುವುದನ್ನು ಅಳವಡಿಕೊಂಡು ಉತ್ತಮ ಪ್ರಜೆಯಾಗಿ ಹೊರಹೊಂದಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಜಾತೀಯತೆ ತೊಡೆದು ಹಾಕಿದ ಬಸವಣ್ಣನವರ ವಚನಗಳು ಮತ್ತು ಮಹಾಭಾರತದ ಕಥೆಗಳನ್ನು ಉಲ್ಲೇಖಿಸಿ ವಿದ್ಯಾರ್ಥಿಗಳು ಶಿಕ್ಷಣ, ಜೀವನದಲ್ಲಿ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ನ್ಯಾಯವಾದಿಯಾಗಲು ಸಲಹೆ ನೀಡಿದರು.
ಡಿ ಪಾಲ್ ಸಂಸ್ಥೆಗಳ ಅಧ್ಯಕ್ಷ ರೆವರೆಂಡ್ ಫಾದರ್ ಸಿ.ಎಂ.ವರ್ಗೀಸ್ ಪಯ್ಯಪಿಳ್ಳೈ, ಡಿ ಪಾಲ್ ಕಾನೂನು ನಿರ್ದೇಶಕ ರೆವರೆಂಡ್ ಡಾ.ಬೈಜು ಅಂಟನಿ, ಡಿ ಪಾಲ್ ಇಂಟರ್‌ನ್ಯಾಷನಲ್ ವಸತಿ ಶಾಲೆ ಪ್ರಾಂಶುಪಾಲ ರೆ. ಅನೀಶ್ ಕ್ಷೇವಿಯರ್, ಡಿ ಪಾಲ್ ಕಾನೂನು ಕಾಲೇಜು ಪ್ರಾಂಶುಪಾಲ ನಾಗೇಂದ್ರ, ಹಣಕಾಸು ಆಡಳಿತಾಧಿಕಾರಿ ರೆ. ಫಾದರ್ ಪಾಲ್ ಪರಕ್ಕಳ್, ಉಪಪ್ರಾಂಶುಪಾಲೆ ಡಾ. ಕೆ.ಜಿ.ಲಿಸಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.