ಜೆಡಿಎಸ್‌ನವರಿಗೆ ಹೆಚ್ಚಾಗಿದೆ ರೈತರ ಮೇಲಿನ ಪ್ರೀತಿ

ಕಾಂಗ್ರೆಸ್ ಕಿಸಾನ್‌ನ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ವ್ಯಂಗ್ಯ
ಕಾಂಗ್ರೆಸ್
ಕಾಂಗ್ರೆಸ್
Published on: 

ಪಾಂಡವಪುರ: ಜಿಲ್ಲೆಯ ಜೆಡಿಎಸ್‌ನ ಮಾಜಿ ಶಾಸಕರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ರೈತರ ಬಗ್ಗೆ ಎಲ್ಲಿಲ್ಲದ ಕಾಳಜಿ ಬಂದಿದೆ ಎಂದು ಕಾಂಗ್ರೆಸ್ ಕಿಸಾನ್‌ನ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ಟೀಕಿಸಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದರು ಎಂದು ಹೇಳುವ ಜೆಡಿಎಸ್ ನಾಯಕರು ಈ ಹಿಂದಿನ ಯುಪಿಎ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದನ್ನು ಮರೆತಂತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬಾಯಿ ಚಪಲಕ್ಕೆ ಜಿಲ್ಲೆ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಟೀಕಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಉದ್ಯೋಗ ಗಿಟ್ಟಿಸಲು ನಿರುದ್ಯೋಗಿ ಮಾಜಿ ಶಾಸಕರು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಜಲಸಂಪನ್ಮೂಲ ಹಾಗೂ ಕೃಷಿ ಸಚಿವರಿಗೆ ಏನು ಗೊತ್ತಿಲ್ಲ ಎಂದಿರುವ ಜೆಡಿಎಸ್ ನಾಯಕರಿಂದ ನಮ್ಮ ಸಚಿವರು ಪಾಠ ಕಲಿಯಬೇಕಿಲ್ಲ. 4 ಬಾರಿ ಸಚಿವರಾಗಿ ಪ್ರಮುಖ 4 ಖಾತೆ ನಿರ್ವಹಿಸಿರುವ ಚಲುವರಾಯಸ್ವಾಮಿ ಹಾಗೂ 2 ಬಾರಿ ಸಚಿವರಾಗಿ ಪ್ರಮುಖ 2 ಖಾತೆ ನಿಬಾಯಿಸಿರುವ ನರೇಂದ್ರಸ್ವಾಮಿ ಅವರು ಶಾಸಕರಾಗಿದ್ದ ಕೆ.ಸುರೇಶ್‌ಗೌಡ ಮತ್ತು ಕೆ.ಅನ್ನದಾನಿಯಿಂದ ಹೇಳಿಸಿಕೊಂಡು ಕಾರ್ಯ ನಿರ್ವಹಿಸುವ ಅವಶ್ಯಕತೆ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net