ಕ್ರೀಡಾಕೂಟದಲ್ಲಿ ಬಾಲಕಿಯರ ಸಾಧನೆ

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದನೆ
ಪಾಂಡವಪುರ ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಆಡಳಿತ ಮಂಡಳಿಯರು ಅಭಿನಂದಿಸಿದರು.
ಪಾಂಡವಪುರ ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಆಡಳಿತ ಮಂಡಳಿಯರು ಅಭಿನಂದಿಸಿದರು. Girls' achievements at the sports meet
Published on: 

ಪಾಂಡವಪುರ: ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ವಿಭಾಗದ ವಿದ್ಯಾರ್ಥಿಗಳು 2026-27ನೇ ಸಾಲಿನಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಕ್ರೀಡಾಕೂಟದ ವಿವಿಧ ವಿಭಾಗದಲ್ಲಿ ಗೆಲುವು ಸಾಧಿಸಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದರು.

ಪದವಿ ಪೂರ್ವ ವಿಭಾಗ ಅಥ್ಲೆಟಿಕ್ಸ್ ವಿಭಾಗದಲ್ಲಿ ಅಕ್ಷರ ಎನ್. ಗೌಡ-ಚಕ್ರ ಎಸೆತ, ಹ್ಯಾಮರ್ ಥ್ರೋ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಮಾನಸಾ. ಕೆ-ಜಾವಲಿನ್‌ನಲ್ಲಿ ಪ್ರಥಮ, ವಂದನಾ ಎನ್.ಜಿ-ಜಾವಲಿನ್‌ನಲ್ಲಿ ದ್ವಿತೀಯ, ಅನು-ಎತ್ತರ ಜಿಗಿತದಲ್ಲಿ ಪ್ರಥಮ, ಕವನಾ-ತ್ರಿವಿಧ ಜಿಗಿತ ಪ್ರಥಮ, ಪಲ್ಲವಿ.ಎಚ್- ನಡಿಗೆ ಪ್ರಥಮ, ಹ್ಯಾಮರ್ ದ್ವಿತೀಯ, ಮಮತಾ ಕುಮಾರಿ-ನಡಿಗೆ ದ್ವಿತೀಯ.

ಕಬಡ್ಡ ತಂಡ- ಪ್ರಥಮ ಸ್ಥಾನ, ವಾಲಿಬಾಲ್ ತಂಡ- ಪ್ರಥಮ ಸ್ಥಾನ, ಬಾಲ್ ಬ್ಯಾಡ್ಮಿಂಟನ್ - ಪ್ರಥಮ ಸ್ಥಾನ ಗಳಿಸಿದ್ದು ತಂಡದ ಎಲ್ಲರನ್ನೂ ಅಭಿನಂದಿಸಿದರು.

ಪ್ರೌಢಶಾಲೆ ವಿಭಾಗ ಅಥ್ಲೆಟಿಕ್- ಜೀವಿತಾ ಸಿ.ಎನ್- ಗುಂಡು ಎಸೆತ ಪ್ರಥಮ, ದಿವ್ಯಶ್ರೀ-ಚಕ್ರ ಎಸೆತ ಪ್ರಥಮ ಸ್ಥಾನಗಳಿಸಿದ್ದಾರೆ.

ಬಾಲ್ ಬ್ಯಾಡ್ಮಿಂಟನ್ ತಂಡ- ಪ್ರಥಮ ಹಾಗೂ ಚೆಸ್ ತಂಡ- ಪ್ರಥಮ ಸ್ಥಾನಗಳಿಸಿದ್ದು ಎಲ್ಲರನ್ನೂ ಅಭಿನಂದಿಸಲಾಯಿತು.

ಸಿ.ಎಸ್.ಪುಟ್ಟರಾಜು ಮಾತನಾಡಿ, ಬಾಲಕಿಯರ ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಾಲೂಕುಮಟ್ಟದ ಕ್ರೀಡಾಕೂಟದ ಹಲವು ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹೆಣ್ಣುಮಕ್ಕಳು ಸ್ಟ್ರಾಂಗ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಹೆಣ್ಣುಮಕ್ಕಳು ಕ್ರೀಡಾಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲೂ ಸಹ ಉತ್ತಮವಾಗಿ ಆಟವಾಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಟಿ.ರಾಮಕೃಷ್ಣೇಗೌಡ, ನಿರ್ದೇಶಕ ಪ್ರಸನ್ನಕುಮಾರ್, ಆಡಳಿತಾಧಿಕಾರಿ ಬಿ.ಮಂಜುಳಾ, ಪ್ರಾಂಶುಪಾಲ ಎಸ್.ಎ.ಮಮತಾ, ಸಹ ಶಿಕ್ಷಕಿ ಎ.ಲತಾ, ದೈಹಿಕ ಶಿಕ್ಷಣ ಶಿಕ್ಷಕಿ ಬಿ.ಎಸ್.ಅನಿತಾ, ಯು.ಸಿ. ವಿಂದ್ಯಾ ಸೇರಿದಂತೆ ಉಪನ್ಯಾಸಕರು, ಸಹ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net