ಅಂಬೇಡ್ಕರ್ ನಗರದಲ್ಲಿ ರೈಲ್ವೆ ಅಂಡರ್‌ಪಾಸ್ ಶೀಘ್ರ

ಸಂಸದ ಶ್ರೇಯಸ್ ಎಂ.ಪಟೇಲ್ ಭರವಸೆ
ಹೊಳೆನರಸೀಪುರದ ಡಾ.ಬಿ.ಆರ್.ಅಂಬೇಡ್ಕರ್ ನಗರಕ್ಕೆ ಂಸದ ಶ್ರೇಯಸ್ ಎಂ.ಪಟೇಲ್ ಭೇಟಿ ನೀಡಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಸಂಬಂಧ ಸ್ಥಳ ಪರಿಶೀಲಿಸಿದರು. ಎಚ್.ಟಿ.ಲಕ್ಷ್ಮಣ, ಎಚ್.ಎನ್.ರಾಘವೇಂದ್ರ, ಎಚ್.ಪಿ.ನಾಗರತ್ನಾ, ಎಚ್.ಆರ್.ಕೃಷ್ಣಮೂರ್ತಿ, ಮಧುಸೂದನ, ಕೇಶವಮೂರ್ತಿ ಇದ್ದರು.

Published on: 

ಹೊಳೆನರಸೀಪುರ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಮಾಡುವುದಾಗಿ ಸಂಸದ ಶ್ರೇಯಸ್ ಎಂ.ಪಟೇಲ್ ಭರವಸೆ ನೀಡಿದ್ದಾರೆ.

ಬಡಾವಣೆಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು. ಬಡಾವಣೆಯ ಪಕ್ಕದಲ್ಲೇ ಹಾಸನ-ಮೈಸೂರು ರೈಲ್ವೆ ಮಾರ್ಗವಿದ್ದು, ಮೃತಪಟ್ಟವರನ್ನು ಸಾಗಿಸಲು ಸಂಕಷ್ಟ ಅನುಭವಿಸುವಂತಾಗಿದೆ. ಈ ಸಮಸ್ಯೆ ಪರಿಹರಿಸುವ ಸಲುವಾಗಿ ರೈಲ್ವೆ ಇಲಾಖೆ ಸಚಿವರು, ಅಧಿಕಾರಿಗಳ ಗಮನ ಸೆಳೆದ ಪರಿಣಾಮ ಅಂಡರ್‌ಪಾಸ್ ಕಾಮಗಾರಿಯನ್ನು ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಇಲಾಖೆ ಹಸಿರು ನಿಶಾನೆ ತೋರಿದೆ ಎಂದು ಮಾಹಿತಿ ನೀಡಿದರು.

ಬಡಾವಣೆಯ ಜನತಾ ಕಾಲನಿ ನಿವಾಸಿಗಳ ಮನವಿಗೆ ಸ್ಪಂದಿಸಿದ ಸಂಸದರು, ಬಡಾವಣೆಗೆ ಅವಶ್ಯಕವಾಗಿ ಬೇಕಿರುವ ರಸ್ತೆ, ಚರಂಡಿ, ವಿದ್ಯುತ್, ಬೀದಿ ದೀಪಗಳ ಅವ್ಯವಸ್ಥೆ ವೀಕ್ಷಿಸಿದರು. ಅಲ್ಲದೆ ಹಕ್ಕು ಪತ್ರ, ನಿವೇಶನ, ಮನೆ ಒದಗಿಸಿಕೊಡುವ ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಪುರಸಭೆ ಮಾಜಿ ಸದಸ್ಯ ಎಚ್.ಎನ್.ರಾಘವೇಂದ್ರ, ಎಚ್.ಪಿ.ನಾಗರತ್ನಾ, ಎಚ್.ಆರ್.ಕೃಷ್ಣಮೂರ್ತಿ, ಮಧುಸೂದನ, ಕೇಶವಮೂರ್ತಿ, ಕಿರಣ್, ಯೋಗಣ್ಣ ಭೋಜ, ಶಿವಾನಂದ, ಆರ್.ರಂಗಸ್ವಾಮಿ, ದೇವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net