ಸರ್ಕಾರ ರಂಗ ಕಲಾವಿದರನ್ನು ಪ್ರೋತ್ಸಾಹಿಸಲಿ: ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ್ ಒತ್ತಾಯ

ಮಂಡ್ಯ ನಗರದ ಮಧುರ ಮಂಡ್ಯ ರಂಗಕಲಾ ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಹಿರಿಯ ಕಲಾವಿದ ನಾಗರಾಜು ಅವರನ್ನು ಸನ್ಮಾನಿಸಲಾಯಿತು.
ಮಂಡ್ಯ ನಗರದ ಮಧುರ ಮಂಡ್ಯ ರಂಗಕಲಾ ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಹಿರಿಯ ಕಲಾವಿದ ನಾಗರಾಜು ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಶ್ರೀರಾಮನವಮಿ ಆಚರಣೆ
  • ಮಧುರ ಮಂಡ್ಯ ರಂಗಕಲಾ ಟ್ರಸ್ಟ್‌ನಲ್ಲಿ ಆಯೋಜನೆ
ಮಂಡ್ಯ: ಸರ್ಕಾರ ಹಿರಿಯ ರಂಗ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ್ ಒತ್ತಾಯಿಸಿದರು.
ನಗರದ ಮಧುರ ಮಂಡ್ಯ ರಂಗಕಲಾ ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುತ್ತಿರುವ ಕಲಾವಿದರು ಹಾಗೂ  ಕಲಾ ಸಂಘಕ್ಕೆ ಉತ್ತೇಜನ ನೀಡಬೇಕು ಎಂದರು. 
ಹಿರಿಯ ರಂಗ ನಿರ್ದೇಶಕ ಕೃಷ್ಣರಾಜ ಮಾತನಾಡಿ, ಹವ್ಯಾಸಿ ಕಲಾವಿದರು ತಮ್ಮ ವೃತ್ತಿಯ ನಡುವೆ ಪ್ರೌವೃತ್ತಿಯಾಗಿ ರಂಗಕಲೆಯನ್ನು ಬೆಳೆಸುತ್ತಿರುವುದನ್ನು ಶ್ಲಾಘಿಸಿದರು. 
ಹಿರಿಯ ಕಲಾವಿದರಾದ ಬಸವರಾಜ್, ಸುಧೀರ್, ಶಿವರಾಂ, ಸಂತೋಷ, ಜ್ಯೋತಿ, ರಘು, ರಾಮಲಿಂಗೇಗೌಡ, ಚಿಕ್ಕಮಂಡ್ಯ ಕೃಷ್ಣ ಇತರರಿದ್ದರು. ಇದೇ ವೇಳೆ ಹಿರಿಯ ಕಲಾವಿದ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಶ್ರೀರಾಮನವಮಿ ಅಂಗವಾಗಿ ಸಾವಿರಾರು ಜನರಿಗೆ ಪಾನಕ, ಮಜ್ಜಿಗೆ ಮತ್ತು ಪ್ರಸಾದ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net