ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ಗೀತ ಸಂಗೀತ ಎಸ್‌ಪಿಬಿ ಸ್ವರ ಸಂಚಾರ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಗಾಯಕರ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. ಡೇವಿಡ್ ಪ್ರತಿಭಾಂಜಲಿ, ಹಂಸಾ, ಶಂಕರ್, ಪ್ರಸನ್ನ, ಡಾ. ವರ್ಷ ಹೂಗಾರ್, ಡಾ.ಸುಭಾಷ್, ವಿಶ್ವಾಸ್, ಮೋಹನ್ ರಾಗಿಮುದ್ದನಹಳ್ಳಿ, ಹೃಷಿಕೇಶ ಅವರ ಗೀತೆ ಗಾಯನ ಜನರನ್ನು ಸೆಳೆಯಿತು. ಇದಕ್ಕೆಲ್ಲ ಕಳಸವಿಟ್ಟಂತೆ ಜೋಗಿ ಸಿನಿಮಾ ಖ್ಯಾತಿಯ ಸುನೀತಾ ಅವರ ಗಾಯನ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿತು.