ಮರ, ಗಿಡ ಬರಿದು ಮಾಡಿದರೆ ಜೀವಕ್ಕೆ ಕಂಟಕ

ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಸರ್ಕಾರಿ ಪಾಠಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನದಿಂದ ಗಿಡ ವಿತರಿಸಲಾಯಿತು. ವೆಂಕಟೇಶ್, ಹೇಮಂತ್, ಯೋಗೇಶ್ ಇತರರು ಇದ್ದರು.
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಸರ್ಕಾರಿ ಪಾಠಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನದಿಂದ ಗಿಡ ವಿತರಿಸಲಾಯಿತು. ವೆಂಕಟೇಶ್, ಹೇಮಂತ್, ಯೋಗೇಶ್ ಇತರರು ಇದ್ದರು.
Published on
ಕಿಕ್ಕೇರಿ: ಮರಗಿಡಗಳನ್ನು ಕಡಿದು ಬರಿದು ಮಾಡುವುದು ಹೆತ್ತ ತಾಯಿ ಕೊರಳು ಕತ್ತರಿಸಿದಂತೆ ಎಂಬುದನ್ನು ಅರಿತು ಮರಗಿಡಗಳನ್ನು ರಕ್ಷಿಸಿ ಎಂದು ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್ ತಿಳಿಸಿದರು.
ಹೋಬಳಿಯ ಗಡಿಭಾಗದ ಊಗಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಶಾಲೆಗೆ ಗಿಡ ವಿತರಿಸಿ ಮಾತನಾಡಿದ ಅವರು, ಸ್ವಾರ್ಥ, ದುರಾಸೆಗಾಗಿ ಮರಗಿಡ ಬರಿದು ಮಾಡಿದರೆ ಜೀವಕ್ಕೆ ಕಂಟಕವಾಗಲಿದೆ. ಭವಿಷ್ಯದಲ್ಲಿ ಶುದ್ಧ ಗಾಳಿಗೆ ಪರಿತಪಿಸಬೇಕಾಗಲಿದೆ. ಹಣ ಕೊಟ್ಟು ಖರೀದಿಸಲು ಸಾಧ್ಯವಾಗದ ಶುದ್ಧ ಗಾಳಿ ಪ್ರಕೃತಿಯ ಕೊಡುಗೆಯಾಗಿದೆ ಎಂದರು.
ಶಾಲಾವರಣದಲ್ಲಿ ಅಮೂಲ್ಯವಾದ ಮರ, ಗಿಡಗಳಿವೆ. ಮಕ್ಕಳಿಗೆ ಶುದ್ಧ ಗಾಳಿ, ನೆರಳು ನೀಡುವ ಜತೆಗೆ ಪಕ್ಷಿಗಳಿಗೆ ಆಸರೆಯಾಗಿದೆ. ಇವುಗಳನ್ನು ಜೋಪಾನ ಮಾಡಲು ಮಕ್ಕಳಿಗೆ ಈಗಿನಿಂದಲೇ ತಿಳಿಹೇಳುವ ಕೆಲಸ ಮಾಡಲು ಶಿಕ್ಷಕರು ಮುಂದಾಗಬೇಕು. ಪರಿಸರ ಪಾಠ ಮಕ್ಕಳಿಗೆ ಮನದಟ್ಟಾದರೆ ಎಲ್ಲೆಡೆ ಸಮೃದ್ಧಿಯಾಗಿ ಮರಗಿಡ ಬೆಳೆದು ವಾತಾವರಣ ಶುದ್ಧವಾಗಲಿದೆ. ಅನ್ನ, ನೀರು, ಆಹಾರ, ಗಾಳಿ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಿ. ಸಾಧ್ಯವಾದಷ್ಟು ಕಾಲ್ನಡಿಗೆ ಓಡಾಟ, ಮೋಟಾರ್ ಬೈಕ್ ಬಿಟ್ಟು ಪರಿಸರ ಸ್ನೇಹಿ ಬೈಸಿಕಲ್ ಬಳಸಿ ಎಂದು ಮನವಿ ಮಾಡಿದರು.
ಮಕ್ಕಳು ಗಿಡಮರ ಬೆಳೆಸಿ ರಕ್ಷಿಸಲು ಪ್ರತಿಜ್ಞೆ ಮಾಡಿದರು. ಮುಖ್ಯ ಶಿಕ್ಷಕ ಪುಟ್ಟೇಗೌಡ, ಶಿಕ್ಷಕಿ ಶಿಲ್ಪಾ, ಆರೋಗ್ಯ ಇಲಾಖೆಯ ಅನುಷಾ, ಸಂಸ್ಥೆಯ ಹೇಮಂತ್, ಯೋಗೇಶ್, ಧರಣೇಶ್, ಕಿರಣ್, ರವಿ, ವಾಸುದೇವ, ಗೀತಾ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net