ಸುರಕ್ಷಾ ಪರಿಕರ ಧರಿಸಿ ಕಾರ್ಯನಿರ್ವಹಿಸಿ

ಕೇಂದ್ರ ಸರ್ಕಾರದ ನಮಸ್ತೆ ಯೋಜನೆಯಡಿ ಪುರಸಭೆ ಮುಖ್ಯಾಧಿಕಾರಿ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸಿದರು. ಕೋಮಲಾ, ಮಂಜುನಾಥ್, ಎಂ.ಸಿ.ಸಹನಾ ಇತರರು ಇದ್ದರು.
ಕೇಂದ್ರ ಸರ್ಕಾರದ ನಮಸ್ತೆ ಯೋಜನೆಯಡಿ ಪುರಸಭೆ ಮುಖ್ಯಾಧಿಕಾರಿ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸಿದರು. ಕೋಮಲಾ, ಮಂಜುನಾಥ್, ಎಂ.ಸಿ.ಸಹನಾ ಇತರರು ಇದ್ದರು.
Published on
ಪಾಂಡವಪುರ: ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಪೌರಕಾರ್ಮಿಕರು ಸುರಕ್ಷಾ ಪರಿಕರಗಳನ್ನು ಧರಿಸಿಕೊಂಡು ಕೆಲಸ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.
ಪುರಸಭೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪಂಚಾಯತ್ ರಾಜ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ನಮಸ್ತೆ ಯೋಜನೆಯಡಿ ಪೌಕರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ನಮ್ಮ ಸುತ್ತ್ತಲಿನ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದಾಗಿದೆ. ಪೌರಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಧರಿಸದೆ ಯಾವುದೇ ಕಾರಣಕ್ಕೂ ಸ್ವಚ್ಛತೆ ಕೆಲಸದಲ್ಲಿ ತೊಡಗಿಕೊಳ್ಳಬಾರದು. ಅದರಲ್ಲೂ ಒಳಚರಂಡಿ ಕಾರ್ಯದಲ್ಲಿ ತೊಡಗಿಕೊಂಡಾಗ ರಕ್ಷಾ ಕವಚಗಳನ್ನು ಕಡ್ಡಾಯವಾಗಿ ಧರಿಸಬೇಕು. ಸ್ವಚ್ಛತೆ ಜತೆಗೆ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕೋಮಲಾ, ಪರಿಸರ ಇಂಜಿನಿಯರ್ ಎಂ.ಸಿ.ಸಹನಾ, ಪುರಸಭೆ ಆರೋಗ್ಯಾಧಿಕಾರಿ ಮಂಜುನಾಥ್, ಪೌರಕಾರ್ಮಿಕರಾದ ಶಿವಕುಮಾರ್, ಗಣೇಶ್, ಈಶ್ವರ, ಚಂದ್ರ, ಮುರುಗೇಶ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net