ದುಶ್ಚಟಗಳಿಗೆ ಬಲಿಯಾಗದೆ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿ

ಮೇಲುಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿನಿ ದೀಪಿಕಾ ಮತ್ತು ವೈಶಾಲಿ ಅವರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಡಾ.ನಂಜುಂಡಯ್ಯ,  ಹಾಸ್ಯ ಕಲಾವಿದ ಹಾಲತಿ ಜಯರಾಮು, ಸ್ಥಾನಿಕಂ ಸಂತಾನರಾಮನ್, ಸ್ವಾಮಿ, ಅಮೃತಿ ಶಂಕರ್, ಡಾ.ಸುಮಾ, ಡಾ.ಭವಾನಿ ಇತರರಿದ್ದರು.
ಮೇಲುಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿನಿ ದೀಪಿಕಾ ಮತ್ತು ವೈಶಾಲಿ ಅವರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಡಾ.ನಂಜುಂಡಯ್ಯ, ಹಾಸ್ಯ ಕಲಾವಿದ ಹಾಲತಿ ಜಯರಾಮು, ಸ್ಥಾನಿಕಂ ಸಂತಾನರಾಮನ್, ಸ್ವಾಮಿ, ಅಮೃತಿ ಶಂಕರ್, ಡಾ.ಸುಮಾ, ಡಾ.ಭವಾನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೇಲುಕೋಟೆ ಪಿಡಿಒ ರಾಜೇಶ್ವರ್ ಸಲಹೆ
ಮೇಲುಕೋಟೆ: ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದು ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕೆಂದು ಮೇಲುಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಲೇಜು ಜೀವನವನ್ನು ಮೋಜು ಮಸ್ತಿಗೆ ಬಳಸಿಕೊಳ್ಳದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು. ಶ್ರದ್ಧೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದರೆ ನಿಮ್ಮ ಕುಟುಂಬದ ಜೀವನಮಟ್ಟವೇ ಬದಲಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಅದಕ್ಕೆ ತಕ್ಕಂತೆ ಅಭ್ಯಾಸ ಮಾಡಬೇಕಿರುವುದು ಅನಿವಾರ್ಯ ಎಂದರು.
ಮೇಲುಕೋಟೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಂಡಗಳನ್ನು ಮಾಡಿಕೊಂಡು ಕಾಲೇಜಿನ ಉಳಿವಿಗಾಗಿ ದಾಖಲಾತಿಯನ್ನು ಹೆಚ್ಚಿಸಬೇಕು. ಈ ಶೈಕ್ಷಣಿಕ ವರ್ಷದಿಂದಲೇ ಈ ಕಾರ್ಯ ಮಾಡಬೇಕು. ಸರ್ಕಾರ ಮೇಲುಕೋಟೆಯ ಕಾಲೇಜಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಿದೆ. ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ನಂಜುಂಡಯ್ಯ, ಹಾಸ್ಯ ಕಲಾವಿದ ಹಾಲತಿ ಜಯರಾಮು, ಸರ್ಕಾರಿ ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಸ್ಥಾನಿಕಂ ಸಂತಾನರಾಮನ್, ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಸಹಾಯಕ ಪ್ರಾಧ್ಯಾಪಕ ಸ್ವಾಮಿ, ಅಮೃತಿ ಶಂಕರ್, ಡಾ.ಸುಮಾ, ಡಾ.ಭವಾನಿ, ಡಾ.ವೆಂಕಟೇಶಗೌಡ, ಸಹಾಯಕ ಪ್ರಾಧ್ಯಾಪಕ ಸಂತೋಷ್, ಪರಮೇಶ್ವರ್, ಯೋಗೇಶ್, ಮಹೇಶ್‌ಕುಮಾರ್, ಅರುಣ್‌ಕುಮಾರ್, ಡಾ.ಮಹೇಶ್‌ಕುಮಾರ್, ಆಶಾ, ರೇಖಾವತಿ, ಕಚೇರಿ ಸಹಾಯಕರಾದ ಅಭಿಲಾಶ, ಶಾಂಭವಿ ಇದ್ದರು.
2024-25ನೇ ಸಾಲಿನಲ್ಲಿ ಪದವಿಯ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಎಂ.ಎಸ್ ದೀಪಿಕಾ (ಬಿಎ), ಎಂ.ಡಿ ವೈಶಾಲಿ (ಬಿಕಾಂ), ಮತ್ತು 2025-26ನೇ ಸಾಲಿನಲ್ಲಿ ಬಿಎ ವಿಭಾಗದ ಕೆ.ಎಂ.ಪ್ರಿಯಾ ಮತ್ತು ಬಿಕಾಂ ವಿಭಾಗದ ದರ್ಶನ್‌ಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಚಿತ್ರ 21ಎಂ.ಎಲ್.ಕೆ1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net