ಕೋಡಿಮಾರನಹಳ್ಳಿಯ ಹರೀಶ್ ಅವರ ಪತ್ನಿ ವಿನಿತಾ ತನ್ನ ಮಾವ ಪುಟ್ಟರಾಜು ಜತೆ ಬೈಕ್‌ನಲ್ಲಿ ಶುಕ್ರವಾರ ಹಲಸನಹಳ್ಳಿಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಹರಿಯಾಲದಮ್ಮ ಗುಡಿ ಮಾರ್ಗದಿಂದ ಬಂದ ಬೈಕ್ ಸವಾರ ವಿನಿತಾ ಅವರ ಕತ್ತಿಗೆ ಕೈಹಾಕಿ ಮಾಂಗಲ್ಯ ಸರ ಕಸಿದಿದ್ದಾನೆ. ಸರವನ್ನು ಜೋಪಾನ ಮಾಡಿಕೊಳ್ಳಲು ಹೋಗಿ ವಿಮಿತಾ ಬೈಕ್‌ನಿಂದ ಬಿದ್ದು, ಸಣ್ಣಪುಟ್ಟ ಗಾಯವಾಗಿದೆ.