ತೈಲೂರು ಕೆರೆಯಲ್ಲಿ ಬೀಡುಬಿಟ್ಟ ಕಾಡಾನೆಗಳು

ಮದ್ದೂರು ತಾಲೂಕಿನ ತೈಲೂರು ಕೆರೆಯಲ್ಲಿ ಬೀಡು ಬಿಟ್ಟಿರುವ ಆನೆಗಳು.
ಮದ್ದೂರು ತಾಲೂಕಿನ ತೈಲೂರು ಕೆರೆಯಲ್ಲಿ ಬೀಡು ಬಿಟ್ಟಿರುವ ಆನೆಗಳು.
Published on
ಮದ್ದೂರು: ತಾಲೂಕಿನ ತೈಲೂರು ಕೆರೆಯಲ್ಲಿ ಮೂರು ಕಾಡಾನೆಗಳು ಆಹಾರ ಅರಸಿಕೊಂಡು ಬಂದು ಬುಧವಾರ ರಾತ್ರಿ ಬೀಡು ಬಿಟ್ಟಿವೆ.
ಎರಡು ಗಂಡು, ಒಂದು ಹೆಣ್ಣು ಆನೆ ಎಂದು ತಿಳಿದು ಬಂದಿದ್ದು, ಚನ್ನಪಟ್ಟಣದ ಶ್ರೀ ನರಸಿಂಹಸ್ವಾಮಿ ಅರಣ್ಯ ಪ್ರದೇಶದ ಮೂಲಕ ಆನೆಗಳು ತೈಲೂರು ಕೆರೆಗೆ ಬಂದಿದೆ.
ಆನೆಗಳು ಬರುವ ಮಾರ್ಗ ಮಧ್ಯೆ ರೈತರು ಬೆಳೆದ ಕಬ್ಬು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳನ್ನು ತುಳಿದು ಹಾಳು ಮಾಡಿದೆ ಎನ್ನಲಾಗಿದೆ. ಆನೆಗಳು ಕಂಡು ಬಂದಿರುವುದರಿಂದ ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರು ಹಾಗೂ ರೈತರು ಎಚ್ಚರಿಕೆಯಿಂದ ಇರುವಂತೆ ಗ್ರಾಪಂ ವತಿಯಿಂದ ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗಿದೆ.
ಸಂಜೆ ಹುಣಸೂರಿನಿಂದ ಆನೆ ಕಾರ್ಯಪಡೆ ಕರೆಸಿ ಸುರಕ್ಷಿತವಾಗಿ ಆನೆಗಳನ್ನು ವಾಪಸ್ ಅರಣ್ಯ ಪ್ರದೇಶಕ್ಕೆ ಕಳುಹಿಸಲು ಅರಣ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಡಿ.ರಘು, ಗವಿಯಪ್ಪ, ಶೈಲಜಾ, ಸಂಪತ್, ಪಟೇಲ್ ಸೇರಿದಂತೆ ಇನ್ನಿತರರು ಆಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net