ಮತದಾರರ ಪರಿಷ್ಕರಣೆಯ ಜಾಗೃತಿ ಅಗತ್ಯ

ಕಿಕ್ಕೇರಿಯಲ್ಲಿ ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಸಹದೇವು, ಚಲುವರಾಯಸ್ವಾಮಿ, ಕುಮಾರಸ್ವಾಮಿ, ಎಸ್.ಎಂ. ಬಸವರಾಜು ಮತ್ತಿತರರಿದ್ದರು.
ಕಿಕ್ಕೇರಿಯಲ್ಲಿ ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಸಹದೇವು, ಚಲುವರಾಯಸ್ವಾಮಿ, ಕುಮಾರಸ್ವಾಮಿ, ಎಸ್.ಎಂ. ಬಸವರಾಜು ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಸಹದೇವು ಹೇಳಿಕೆ
ಕಿಕ್ಕೇರಿ: ನೈಜ್ಯ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು ಎಸ್‌ಐಆರ್‌ಉದ್ದೇಶವಾಗಿದೆ ಎಂದು ಕೆಪಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಸಹದೇವು ತಿಳಿಸಿದರು.
ಇಲ್ಲಿನ ಕೆಪಿಎಸ್ ಪಿಯು ಕಾಲೇಜು ಹಾಗೂ ಪ್ರೌಢಶಾಲೆ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಾಹಿತಿ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಸಮಗ್ರ ಮತದಾರರ ಪರಿಷ್ಕರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸರ್ಕಾರದ ಸವಲತ್ತು ಪಡೆಯಲು ಇದು ಬಹಳ ಅವಶ್ಯವಾಗಿದೆ. ಪ್ರತಿ ಮನೆಗೆ ಬೂತ್‌ಮಟ್ಟದ ಅಧಿಕಾರಿಗಳು ಭೇಟಿ ನೀಡಲಿದ್ದು, ಬಿಎಲ್‌ಒಗಳು ಎಸ್‌ಐಆರ್ ಅರ್ಜಿ ನೀಡಲಿದ್ದಾರೆ. ಈ ಸಂದರ್ಭ ಮತದಾರರು ನಿಖರ ಮಾಹಿತಿ ನೀಡಿ ಸಹಿಯೊಂದಿಗೆ ಮತ್ತೆ ಅರ್ಜಿ ನೀಡಬೇಕಿದೆ ಎಂದರು.
ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, 18 ವರ್ಷ ಮೇಲ್ಪಟ್ಟವರು ಮತದಾನಕ್ಕೆ ಅರ್ಹರಾಗಿದ್ದು, ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ಹೆಸರುಗಳ ಪರಿಶೀಲನೆ, ತಿದ್ದುಪಡಿ, ಸೇರ್ಪಡೆ, ಮೃತಪಟ್ಟವರು, ಸ್ಥಳಾಂತರಗೊಂಡವರ ಮಾಹಿತಿ ನೀಡುವ ಕುರಿತು ಅರಿವು ಮೂಡಿಸಬೇಕು. ಇಲ್ಲವಾದರೆ ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಲಿದೆ ಎಂದು ಹೇಳಿದರು.
ಮತದಾರರ ಹೆಸರು ಸೇರ್ಪಡೆಗೆ 12ವಿಧದ ಗುರುತಿನ ದಾಖಲೆಗಳಿದ್ದು ಇವುಗಳಲ್ಲಿ ಲಭ್ಯವಿರುವ ಸೂಕ್ತ ದಾಖಲೆ ನೀಡಬೇಕು. ಮತದಾನದ ಹಕ್ಕು ಕಳೆದುಕೊಳ್ಳುವುದರಿಂದ ಉತ್ತಮ ಸಮಾಜ, ನಾಯಕನ ಆಯ್ಕೆ ಕಷ್ಟವಾಗಲಿದೆ. ಎಸ್‌ಐಆರ್ ಪ್ರಕ್ರಿಯೆ ಒಂದು ರೀತಿಯ ಗುಮ್ಮ ಎಂಬ ಭಯ ಹಲವರಲ್ಲಿದ್ದು, ಗೊಂದಲವನ್ನು ನಿವಾರಣೆ ಮಾಡಲು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಎಸ್‌ಐಆರ್ ಕುರಿತು ಭಿತ್ತಿಫಲಕ ಹಿಡಿದು ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಿದರು. ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ವಿವಿಧ ಶಿಕ್ಷಕರು ಎಸ್‌ಐಆರ್ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಎನ್‌ಎಸ್‌ಎಸ್ ಅಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಎನ್‌ಸಿಸಿ ಅಧಿಕಾರಿ ಎಸ್.ಎಂ. ಬಸವರಾಜು, ಬೋಧಕ ವೃಂದದ ಎನ್. ರವೀಂದ್ರ, ಎ.ಎಂ. ಮಂಜುನಾಥ್, ಎಸ್.ಡಿ. ಹರೀಶ್, ವೆಂಕಟರಮಣ ಹೆಗಡೆ, ಅರ್ಪಿತಾ, ಶಾಯಿದ್ ರಿಜ್ವಿ, ಲಾವಣ್ಯ, ಸಹನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net