ಕಿಕ್ಕೇರಿಯಲ್ಲಿ ವಿಷ್ಣು ನಾದಸ್ಮರಣೆ

ಕಿಕ್ಕೇರಿಯಲ್ಲಿ ಶ್ರಾವಣಮಾಸದ ಕಡೆಯ ಶನಿವಾರ ಕೃಷ್ಣ, ವಿಷ್ಣು ದೇವರನ್ನು ಪೂಜಿಸಲಾಯಿತು.
ಕಿಕ್ಕೇರಿಯಲ್ಲಿ ಶ್ರಾವಣಮಾಸದ ಕಡೆಯ ಶನಿವಾರ ಕೃಷ್ಣ, ವಿಷ್ಣು ದೇವರನ್ನು ಪೂಜಿಸಲಾಯಿತು.
Published on
ಕಿಕ್ಕೇರಿ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕೃಷ್ಣನ ಆರಾಧನೆ, ವಿಷ್ಣು ನಾದಸ್ಮರಣೆ ಶ್ರದ್ಧಾಭಕ್ತಿಯಿಂದ ಮೊಳಗಿತು.
ಇಲ್ಲಿನ ಜನಾರ್ಧನ ದೇಗುಲ, ನರಸಿಂಹಸ್ವಾಮಿ ದೇಗುಲದಲ್ಲಿ ವಿವಿಧ ಪೂಜಾರಾಧನೆಗಳು ನೆರವೇರಿದವು. ಹೋಬಳಿಯ ಚಿಕ್ಕಳಲೆ, ಬೋಳಮಾರನಹಳ್ಳಿ, ಗೋವಿಂದನಹಳ್ಳಿ, ಗೂಡೇಹೊಸಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಕಡೆಯ ಶನಿವಾರ ಸೇರಿದಂತೆ ಎರಡು ದಿನಗಳು ಕೃಷ್ಣನ ಸ್ಮರಣೆ, ಲಕ್ಷ್ಮೀನರಸಿಂಹಸ್ವಾಮಿ, ಶ್ರೀನಿವಾಸ ದೇವರ ಪೂಜಾರಾಧನೆಗಳು ವಿಜೃಂಭಣೆಯಿಂದ ನೆರವೇರಿತು.
ದಾಸಯ್ಯನ ಒಕ್ಕಲಿನ ಹಲವು ಮನೆಗಳಲ್ಲಿ ದಾಸಪ್ಪನ ಆಹ್ವಾನಿಸಿ, ರಾಮಧೂತ ಹನುಮಂತ, ಗೋವಿಂದನಿಗೆ ಪೂಜೆ ಸಲ್ಲಿಸಿ, ವಿವಿಧ ಬಗೆಯ ಸಿಹಿ, ತಿನಿಸು, ಭಕ್ಷ್ಯ ಭೋಜನಗಳ ನೈವೇದ್ಯ ಅರ್ಪಿಸಿ ಪೂಜಿಸಲಾಯಿತು. ಮಕ್ಕಳು ಪ್ರತಿ ಮನೆ, ಅಂಗಡಿಗಳಿಗೆ ತೆರಳಿ ಗೋವಿಂದ ಸ್ಮರಣೆಯೊಂದಿಗೆ ಉಪದನ್ನ ಸೇವೆ ಭಗವಂತನಿಗೆ ಅರ್ಪಿಸಿದರು. ದೇಗುಲಗಳಲ್ಲಿ ಸಿಹಿ ಪೊಂಗಲ್, ತೀರ್ಥ ಪ್ರಸಾದ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net