ಮೌಲ್ಯಯುತ ಕೋರ್ಸ್‌ಗಳಿಂದ ಔದ್ಯೋಗಿಕ ದಾರಿ ಸುಗಮ

ಪಾಂಡವಪುರ ತಾಲೂಕಿನ ಎಸ್‌ಟಿಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಟ್ಯಾಲಿ ಫ್ರೈಮ್ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಕೃಷ್ಣರಾಜ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಿಶಾಂತ್ ಎ.ನಾಯ್ಡು ಇತರರು ಇದ್ದರು.
ಪಾಂಡವಪುರ ತಾಲೂಕಿನ ಎಸ್‌ಟಿಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಟ್ಯಾಲಿ ಫ್ರೈಮ್ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಕೃಷ್ಣರಾಜ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಿಶಾಂತ್ ಎ.ನಾಯ್ಡು ಇತರರು ಇದ್ದರು.
Published on
ಪಾಂಡವಪುರ: ವಿದ್ಯಾರ್ಥಿಗಳು 3 ವರ್ಷದ ಪದವಿ ಮುಗಿಸಿ ಕಾಲೇಜಿನಿಂದ ಹೊರಹೋಗುವಾಗ ಪದವಿ ಪ್ರಮಾಣ ಪತ್ರದ ಜತೆಗೆ ಸಂವಹನ ಕೌಶಲ ಮತ್ತು ಮೌಲ್ಯಯುತ ಕೋರ್ಸ್‌ಗಳ ಪ್ರಮಾಣ ಪತ್ರ ಪಡೆದುಕೊಂಡರೆ ಮುಂದಿನ ಔದ್ಯೋಗಿಕ ದಾರಿ ಸುಗಮವಾಗುತ್ತದೆ ಎಂದು ಕೃಷ್ಣರಾಜ ಪದವಿಪೂರ್ವ ಕಾಲೇಜಿ ಪ್ರಾಂಶುಪಾಲ ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ, ತರಬೇತಿ ಮತ್ತು ಉದ್ಯೋಗ ಕೋಶ, ಆಂತರಿಕ ಗುಣಮಟ್ಟಕೋಶ ಮತ್ತು ಟ್ಯಾಲಿ ಅಕಾಡೆಮಿ ಮುಂಬೈ ಇವರ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ 2025-26ನೇ ಶೈಕ್ಷಣಿಕ ಸಾಲಿನ ಮೌಲ್ಯಯುತ ಕೋರ್ಸ್‌ನ ಟ್ಯಾಲಿ ಪ್ರೈಮ್ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಟ್ಯಾಲಿ ಪ್ರೈಮ್ ಕೋರ್ಸ್ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದ್ದು, ಕೌಶಲ ಮತ್ತು ಜ್ಞಾನದೊಂದಿಗೆ ಮುಂದಿನ ಔದ್ಯೋಗಿಕ ಜಗತ್ತಿಗೆ ಸಜ್ಜುಗೊಳಿಸುತ್ತದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಶುಭ ಕೋರಿದರು.
ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಿಶಾಂತ್ ಎ.ನಾಯ್ಡು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮೌಲ್ಯಯುತ ಕೋರ್ಸ್‌ಗಳನ್ನು ಹೊಂದುವುದು ಅತ್ಯವಶ್ಯಕ ಹಾಗೂ ಈ ಪ್ರಮಾಣಪತ್ರವು ವಿದ್ಯಾರ್ಥಿಗಳ ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ತರಬೇತಿಯಲ್ಲಿ ಒಟ್ಟು 131 ವಿದ್ಯಾರ್ಥಿಗಳು ತೇರ್ಗಡೆಯಾಗಿ ತಮ್ಮ ಪ್ರಮಾಣ ಪತ್ರ ಪಡೆದುಕೊಂಡರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ಎಚ್.ಚರಣ್‌ರಾಜ್, ಐಕ್ಯೂಎಸಿ ಸಂಯೋಜಕರಾದ ರಘುನಂದನ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಪಲ್ಲವಿ, ಡಿ.ಎಂ.ಕುಮಾರ್, ಡಿ.ಶ್ರೇಯಸ್‌ಕಾಂತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net