ಮದ್ದೂರು: ತಾಲೂಕಿನ ಕದಲೀಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕದಲೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಅಂಗವಾಗಿ ಡಿ.30ರಂದು ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಟಿ.ಶಿವರಾಮ್ ಹಾಗೂ ಪ್ರಧಾನ ಅರ್ಚಕ ನಾರಾಯಣ್ ಅಯ್ಯಂಗಾರ್ ತಿಳಿಸಿದ್ದಾರೆ.
ಪ್ರಾತಃಕಾಲ ಮಹಾಭಿಷೇಕ, ಬೆಳಗ್ಗೆ 5.30 ಗಂಟೆಗೆ ಮಹಾಮಂಗಳಾರತಿ, ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಶ್ರೀ ವೈಕುಂಠ ದ್ವಾರದರ್ಶನ ನಂತರ ಸಹಸ್ರಾರು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಪ್ರಕಟಣೆಯಲ್ಲಿ ಮಾಡಿದ್ದಾರೆ.