ಬೆಳಗೊಳದಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ

ಶ್ರೀರಂಗಪಟ್ಟಣ ತಾಲೂಕು ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನಕ್ಕೆ  ಚಾಲನೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕು ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
Published on
ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಪಶು ಚಿಕಿತ್ಸಾಲಯದ ಆವರಣದಲ್ಲಿ ಶ್ರೀರಂಗಪಟ್ಟಣ ತಾಲೂಕು ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕುವ ಮೂಲಕ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 30 ಸಾವಿರಕ್ಕೂ ಹೆಚ್ಚು ಎತ್ತು, ಎಮ್ಮೆ, ಹಸುಗಳು ಇದ್ದು, ಇವುಗಳಿಗೆ ಕಡ್ಡಾಯವಾಗಿ ಲಸಿಕೆಗಳನ್ನು ಮಾಲೀಕರು ಹಾಕಿಸಬೇಕು, ಪ್ರತಿಯೊಂದು ಗ್ರಾಮದಲ್ಲಿ ನಮ್ಮ ಸಿಬ್ಬಂದಿ, ಸೇವಾ ಪ್ರತಿನಿಧಿಗಳು ಪಶುಗಳನ್ನು ಗುರುತಿಸಿ ಲಸಿಕೆ ಹಾಕುತ್ತಾರೆ. ಲಸಿಕೆಯಿಂದ ಯಾವುದೆ ತೊಂದರೆಯಿಲ್ಲ. ಜಾನುವಾರುಗಳ ಮಾಲೀಕರಿಗೆ ಭಯಬೇಡ, ಇಂದಿನಿಂದ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದ್ದು, ಪ್ರತಿ ನಿತ್ಯ ಬೆಳಗ್ಗೆ 6 ರಿಂದ 9ರ ತನಕ ಲಸಿಕೆ ಹಾಕಲಾಗುತ್ತದೆ. ಗರ್ಭ ಧರಿಸಿದ ಹಸು ಹಾಗೂ ಎಮ್ಮೆಗಳಿಗೂ ಲಸಿಕೆ ಹಾಕಿಸಬಹುದು. ಈ ರೋಗ ನಿಯಂತ್ರಣಕ್ಕೆ ಜಾನುವಾರು ಮಾಲೀಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಬೆಳಗೊಳ ಗ್ರಾಮದ ದೊಡ್ಡ ಯಜಮಾನ ಶ್ರೀನಿವಾಸ್, ಚಿಕ್ಕ ಯಜಮಾನ ವಿಷಕಂಠೇಗೌಡ, ತಾ.ಪಂ ಮಾಜಿ ಸದಸ್ಯ ಬಿ.ಟಿ.ಸ್ವಾಮಿಗೌಡ, ತಾಪಂ ಮಾಜಿ ಉಪಾಧ್ಯಕ್ಷ ಮಹದೇವಸ್ವಾಮಿ, ಪಶು ವೈದ್ಯ ಸುರೇಶ್, ಪ್ರದೀಪ್, ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ರ‌್ಯಾಂಬೋ ರವಿಕುಮಾರ್, ಬೆಳಗೊಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಯತೀಶ್, ಉಪಾಧ್ಯಕ್ಷೆ ಲತಾ, ಸಂಘದ ಸದಸ್ಯರಾದ ಶ್ರೀನಿವಾಸ್, ಬಾಬು, ದೀಪಕ್, ಕುಮಾರ್, ಬಿ.ಎಸ್.ಕುಮಾರ್, ಪದ್ಮಾ, ಸೋಮಾಚಾರಿ, ಕಾರ್ಯದರ್ಶಿ ರಘು ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಪಶು ಇಲಾಖೆ ಸಿಬ್ಬಂದಿ, ಪ್ರತಿನಿಧಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net