ಉಪ್ಪರಿಕೆ ಶ್ರೀಬಸವೇಶ್ವರ ದನಗಳ ಜಾತ್ರೆಗೆ ಚಾಲನೆ

ಕೆ.ಆರ್.ಸಾಗರದ ರೈಲು ನಿಲ್ದಾಣದ ಸಮೀಪದಲ್ಲಿರುವ ಉಪ್ಪರಿಕೆ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಜರುಗಿದ  ಜಾತ್ರೆ.
ಕೆ.ಆರ್.ಸಾಗರದ ರೈಲು ನಿಲ್ದಾಣದ ಸಮೀಪದಲ್ಲಿರುವ ಉಪ್ಪರಿಕೆ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಜರುಗಿದ ಜಾತ್ರೆ.
Published on
ಕೆ.ಆರ್.ಸಾಗರ: ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿರುವ ಉಪ್ಪರಿಕೆ ಶ್ರೀ ಬಸವೇಶ್ವರ ದೇವಸ್ಥಾನದ ಮಾಳದಲ್ಲಿ ದನಗಳ ಜಾತ್ರೆಗೆ ಜಾತ್ರಾ ಸಮಿತಿ ಅಧ್ಯಕ್ಷ ವಿಷಕಂಠೇಗೌಡ ಗುರುವಾರ ಬಸವೇಶ್ವರ ದೇವರ ಪ್ರತಿಮೆಗೆ ಪೂಜೆ ಸಲ್ಲಿಸಿ ದನಗಳ ಜಾತ್ರೆಗೆ ಚಾಲನೆ ನೀಡಿದರು.
ಉಪ್ಪರಿಕೆ ಶ್ರೀ ಬಸವೇಶ್ವರ ಉತ್ಸವ ಮೂರ್ತಿಯ ಕಾವೇರಿ ನದಿಯಲ್ಲಿ ಶುದ್ಧೀಕರಿಸಿ ಮೆರವಣಿಗೆ ಮೂಲಕ ದೇವಾಲಯದ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಲಾಯಿತು. ಎಲ್ಲ ಗ್ರಾಮಗಳಲ್ಲಿ ಭಕ್ತಾದಿಗಳು ಹೂ-ಹಣ್ಣು ನೀಡಿ ಪೂಜೆ ಸಲ್ಲಿಸಿದರು.
ಶ್ರೀ ಉಪ್ಪರಿಕೆ ಬಸವೇಶ್ವರ ದೇವಾಲಯದ ದೇವರಿಗೆ ಪಂಚಾಮೃತ ಅಭಿಷೇಕ ಸಲ್ಲಿಸಿ ಅಲಂಕರಿಸಿ ಪೂಜೆ ಮಾಡಲಾಯಿತು, ಹೋಮ-ಹವನಗಳು ಜಗುರಿದವು. ನಂತರ ದೇವರ ದರ್ಶನಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ಬೆಳಗ್ಗೆಯಿಂದ ಸಂಜೆ ತನಕ ಭಕ್ತವೃಂದದಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಶ್ರೀ ಉಪ್ಪರಿಕೆ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಚಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜಾತ್ರಾ ಸಮಿತಿ ಅಧ್ಯಕ್ಷ ವಿಷಕಂಠೇಗೌಡ ನಮ್ಮ ಈ ಭಾಗದಲ್ಲಿ ಹಲವು ವರ್ಷಗಳಿಂದ ದನಗಳ ಜಾತ್ರೆ ನಡೆಯುತ್ತಾ ಬಂದಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಗಡಿ ಭಾಗದಲ್ಲಿ ಈ ದನಗಳ ಜಾತ್ರೆ ನಡೆಯುತ್ತಿರುವುದು ಹಿರಿಮೆಯಾಗಿದೆ. ಯಂತ್ರಗಳ ಬಳಕೆಯ ಇಂದಿನ ಯುಗದಲ್ಲಿ ಜನರು ರಾಸು ಸಾಕುವುದೇ ಕಷ್ಟವಾಗಿದ್ದು, ಸಾಕಾಣಿಕೆ ಕಡಿಮೆ ಮಾಡಿದ್ದಾರೆ. ಜಮೀನುಗಳಲ್ಲಿ ಯಂತ್ರಗಳಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇದರಿಂದ ದನಗಳು ಕಡಿಮೆಯಾಗುತ್ತಿವೆ. ರೈತ-ದನಗಳ ಬಾಂಧವ್ಯ ಅತ್ಯಗತ್ಯವಾಗಿದೆ. ವ್ಯವಸಾಯದಲ್ಲಿ ದನಗಳ ಪಾತ್ರ ಮಹತ್ವದ್ದಾಗಿದೆ. ರಾಸುಗಳ ನಮ್ಮ ಜೀವನಕ್ಕೆ ಅತ್ಯಗತ್ಯವಾಗಿವೆ ಎಂದರು.
ಮೂಲಸೌಕರ್ಯ ಒಳಗೊಂಡ ದನಗಳ ಜಾತ್ರೆಗಳು ನಡೆಯುವುದು ಒಂದು ಉತ್ತಮ ಬೆಳವಣಿಗೆಯ ಪದ್ಧತಿಯಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿನ ಸಂಪ್ರದಾಯಗಳನ್ನು ನಾವು ಮುಂದುವರಿಸಬೇಕಾಗಿದೆ. ಇದಕ್ಕೆ ಪರಸ್ಪರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಉಪ್ಪರಿಕೆ ಶ್ರೀ ಬಸವೇಶ್ವರ ಜಾತ್ರಾ ಸಮಿತಿ ಕಾರ್ಯದರ್ಶಿ ಎಂ.ಬಿ.ಕುಮಾರ್, ಸಮಿತಿಯ ಹಿರಿಯ ಸದಸ್ಯರಾದ ಸಿಂಗೇಗೌಡ, ಮಲ್ಲೇಶ್, ಜಂಟಿ ಕಾರ್ಯದರ್ಶಿ ವಿನೋದ್‌ಕುಮಾರ್, ಸದಸ್ಯರಾದ ರವಿ, ರಾಘವೇಂದ್ರ, ಸತೀಶ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net