ಗಾಂಜಾ ಪ್ರಕರಣದಲ್ಲಿ ಇಬ್ಬರ ಬಂಧನ

ತಾಲೂಕಿನ ಬಳ್ಳೆಕೆರೆ ಗ್ರಾಮ ಹೊರವಲಯದ ಸಿಡಿಎಸ್ ನಾಲೆ ಏರಿ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಸಂಬಂಧ ವ್ಯವಹರಿಸುತ್ತಿದ್ದ ಆರೋಪಿಗಳನ್ನು ಗಾಂಜಾ ಸೊಪ್ಪು ಸಮೇತ ಪಿಎಸ್ ಐ ವಿನೋದ್ ಕುಮಾರ್ ನೇತೃತ್ವದಲ್ಲಿ ಅರಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Published on
ಶ್ರೀರಂಗಪಟ್ಟಣ: ತಾಲೂಕಿನ ಬಳ್ಳೆಕೆರೆ ಗ್ರಾಮ ಹೊರವಲಯದ ಸಿಡಿಎಸ್ ನಾಲೆ ಏರಿ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಮಾಲು ಸಮೇತ ಅರಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬಳ್ಳೆಕೆರೆ ಗ್ರಾಮದ ಸುನೀಲ್ (46) 850ಗ್ರಾಂ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದು, ಇದನ್ನು ಖರಿದೀಸಲು ಆಗಮಿಸಿದ್ದ ಮಾಕನಹಳ್ಳಿ ಗ್ರಾಮದ ತಿಲಕ್ (27) ನನ್ನು ಗುರುವಾರ ರಾತ್ರಿ ಪೊಲೀರು ಬಂಧಿಸಿದ್ದಾರೆ.
ಅರಕೆರೆ ಠಾಣೆಯ ಸಬ್ ಇನ್ ಸ್ಪೆಕ್ಟರ್ ವಿನೋದ್ ಕುಮಾರ್ ಅವರ ನೇತೃತ್ವದಲ್ಲಿ ಹೆಡ್ ಕಾನ್ಸ್‌ಟೇಬಲ್ ನಾಗೇಂದ್ರ, ಸಿಬ್ಬಂದಿ ಲಕ್ಷ್ಮೀಪುತ್ರ, ಶಿವಪ್ರಸಾದ್, ಕಾರ್ತಿಕ್, ನವೀನ್, ಚೇತನ್ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಆರೋಪಿಗಳ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net