ಬಾಣಗಹಳ್ಳಿ ಗ್ರಾಮದ ರೈತರಾದ ಮಹೇಶ್ ಮತ್ತು ದುಂಡಮ್ಮ ಅವರ ಕಬ್ಬಿನ ಗದ್ದೆಗೆ ಮದ್ಯಾಹ್ನ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಸಂಬಂಧಿಸಿದ ಇಲಾಖೆಯವರು ಪರಿಹಾರ ನೀಡಬೇಕೆಂದು ದುಂಡಮ್ಮ ಅವರ ಪುತ್ರ ಮಹದೇವ ಮನವಿ ಮಾಡಿದರು.