ಬಾಂಗ್ಲಾ ದೇಶದ ವಿರುದ್ಧ ಪಂಜಿನ ಮೆರವಣಿಗೆ

ಕೆ.ಎಂ.ದೊಡ್ಡಿ ಮುಖ್ಯ ರಸ್ತೆಯಲ್ಲಿ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಕೆ.ಎಂ.ದೊಡ್ಡಿ ಮುಖ್ಯ ರಸ್ತೆಯಲ್ಲಿ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
Published on
ಕೆ.ಎಂ.ದೊಡ್ಡಿ: ಬಾಂಗ್ಲಾ ದೇಶದಲ್ಲಿ ದೀಪು ಚಂದ್ರದಾಸ್ ಹಾಗೂ ಅಮೃತ್ ಮಂಡಲ್ ಕೋಮು ದ್ವೇಷದ ಹತ್ಯೆ ಖಂಡಿಸಿ ಹಿಂದು ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಭಾರತಿ ಕಾಲೇಜಿನ ಆವರಣದಲ್ಲಿ ಹಿಂದುಪರ ಸಂಘಟನೆಯ ನೂರಾರು ಕಾರ್ಯಕರ್ತರು ಮದ್ದೂರು ಮಳವಳ್ಳಿ-ಮುಖ್ಯರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಬಾಂಗ್ಲಾದೇಶದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಹಿಂದುಪರ ಸಂಘಟನೆಯ ಮುಖಂಡ ಕದಲೂರು ನವೀನ್ ಮಾತನಾಡಿ, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಬಹುಸಂಖ್ಯಾತ ಮುಸ್ಲಿಮರು ದ್ವೇಷ ಸಾಧಿಸಿ, ಹಿಂದುಗಳ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಅಮಾಯಕರಾದ ದೀಪು ಚಂದ್ರಹಾಸ ಹಾಗೂ ಅಮೃತ್ ಮಂಡಲ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಗಳ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಬಾಂಗ್ಲಾದಲ್ಲಿರುವ ಹಿಂದುಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಭಾರತ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುಬೇಕು. ಇಲ್ಲವಾದರೆ ದೇಶದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹಿಂದುಪರ ಸಂಘಟನೆಯ ಅಣ್ಣೂರು ನವೀನ್, ಕೆ.ಟಿ.ಸುರೇಶ್, ಅಣ್ಣೂರು ಮನೋಹರ್, ಹೋಂಡಾ ಸಿದ್ದೇಗೌಡ, ಕೇಶವ, ಸಂದೀಪ್, ಶಿವರಾಮು, ಮೆಳ್ಳಹಳ್ಳಿ ಪಟಾಂಬಿ, ಮೆಡಿಕಲ್ ಗಿರಿ, ಆರ್‌ಟಿಒ ಚಂದ್ರು, ವಿಜಯ್, ಬೆಟ್ಟೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net