

ಪ್ರಮುಖ ಮುಖ್ಯಾಂಶಗಳು
ಮೃತಪಟ್ಟವರ ಹೆಸರಿನಲ್ಲಿ ಆಸ್ತಿ ಇದೆ. ಕಾನೂನಿನ ಪ್ರಕಾರ ಅವರ ಜೀವಂತ ವಾರಸುದಾರರಿಗೆ ಖಾತೆ ವರ್ಗಾವಣೆ ಮಾಡಬೇಕು. ಅವರು ಜಂಟಿ ಖಾತೆ ಮಾಡಬೇಡಿ, ಹೆಣ್ಣು ಮಕ್ಕಳನ್ನು ಬಿಟ್ಟು ಖಾತೆ ಮಾಡಲು ಕೇಳುತ್ತಾರೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಈಗ ಪೌತಿ ಖಾತೆ ಮಾಡಿಸಿಕೊಂಡು ನಂತರ ವಿಭಾಗ ಮಾಡಿಕೊಂಡು ಪ್ರತ್ಯೇಕ ಮಾಡಿಕೊಳ್ಳಬಹುದು. ರೈತರು ಸಹಕಾರ ನೀಡಿದರೆ ಪೌತಿಖಾತೆ ಆಂದೋಲನ ಯಶಸ್ವಿಯಾಗಲಿದೆ.
ಕೋಟ್..ಮೂರು, ನಾಲ್ಕು ತಲೆಮಾರಿನವರ ಹೆಸರಿನಲ್ಲಿ ಆಸ್ತಿ ಇದೆ. ಎರಡು, ಮೂರು ತಲೆ ಮಾರಿನವರು ಮೃತಪಟ್ಟಿದ್ದಾರೆ. ವಾರಸುದಾರರು ಮೌಖಿಕವಾಗಿ ಹಿಸ್ಸಾ ಮಾಡಿಕೊಂಡು ಅನುಭವಿಸುತ್ತಿದ್ದಾರೆ. ಎಲ್ಲರ ಹೆಸರಿಗೂ ಪೌತಿ ಖಾತೆ ಮಾಡಿಕೊಟ್ಟರೆ ಅನುಭವದಲ್ಲಿರದವರು ತಕರಾರು ಮಾಡಿ ಆಸ್ತಿ ಕೇಳಬಹುದು. ಆದ್ದರಿಂದ ಅನುಭವದಲ್ಲಿರುವವರಿಗೆ ಪೌತಿ ಖಾತೆ ಮಾಡಿಕೊಟ್ಟರೆ ಅನುಕೂಲವಾಗಲಿದೆ.
ಕಂದಾಯ ಅಧಿಕಾರಿಗಳು ಪೌತಿ ಖಾತೆ ಆಂದೋಲನವನ್ನು ಯಶಸ್ವಿಯಾಗಿ ಮಾಡುವುದರ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ನಾನು ಕೂಡ ಆಂದೋಲನದ ಪ್ರಗತಿ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸುತ್ತೇನೆ. ಅಗತ್ಯ ಸಲಹೆ, ಸೂಚನೆಗಳನ್ನು ಅಧಿಕಾರಿಗಳಿಗೆ ನೀಡುತ್ತೇನೆ. ಕೆಲವು ಕಗ್ಗಂಟಿನ ಪ್ರಕರಣಗಳಿವೆ. ಅವುಗಳಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಲೂಕಿನ ರೈತರ ಕೆಲಸವನ್ನು ಅಡಚಣೆಯಿಲ್ಲದಂತೆ ಮಾಡಲು ಕ್ರಮ ವಹಿಸುತ್ತೇನೆ.