ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಪಂಗನಾಮ

ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗದ ಕಾಲನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ನೆರವೇರಿಸಿದರು. ಕೆಂಪರಾಜು, ಚೆಲುವರಾಜು, ಮಾದೇಶ್, ಸಿದ್ದಪ್ಪಾಜಿ, ಜಯರಾಮು ಇದ್ದರು.
ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗದ ಕಾಲನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ನೆರವೇರಿಸಿದರು. ಕೆಂಪರಾಜು, ಚೆಲುವರಾಜು, ಮಾದೇಶ್, ಸಿದ್ದಪ್ಪಾಜಿ, ಜಯರಾಮು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಕಿಡಿ
  • ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಮದ್ದೂರು: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಪಂಗನಾಮ ಹಾಕಿ, ಖಾಲಿ ಚೊಂಬು ನೀಡಿದೆ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.
ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಗುರುವಾರ ಪರಿಶಿಷ್ಟ ವರ್ಗದ ಕಾಲನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯ ಸಂಸದರಾಗಿ ಕೇಂದ್ರ ಸಚಿವರಾಗಿದ್ದರೂ ರಾಜ್ಯಕ್ಕೆ ಹಾಗೂ ತಮ್ಮ ಸ್ವಂತ ಜಿಲ್ಲೆಗೆ ಕೇಂದ್ರ ಬಜೆಟ್‌ನಲ್ಲಿ ಅನ್ಯಾಯವಾಗಿರುವುದರ ಬಗ್ಗೆ ಸಂಸದರು ಏಕೆ ಧ್ವನಿ ಎತ್ತದೆ ಮೌನ ವಹಿಸಿದ್ದಾರೆ. ಈ ಬಗ್ಗೆ ಜನರೇ ಅವರನ್ನು ಪ್ರಶ್ನಿಸಬೇಕು. ಇದು ಬೇಜವಾಬ್ದಾರಿಯೋ ಅಥವಾ ಮಂಡ್ಯದ ಬಗ್ಗೆ ಅವರ ನಿರ್ಲಕ್ಷೃವೋ ಎಂಬುದನ್ನು ಅವರನ್ನೇ ಕೇಳಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿದರು.
ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಸಂಸದ, ಕೇಂದ್ರ ಸಚಿವನಾದ್ರೆ 5 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅವರಿಂದ ಅಂಕಿತ ಹಾಕಿಸುತ್ತೇನೆ ಎಂದಿದ್ದನ್ನು ಜಿಲ್ಲೆಯ ಜನ ಮರೆತಿಲ್ಲ ಎಂದರು.
ಜಿಲ್ಲೆಯ ಸಂಸದರಾಗಿ, ಕೇಂದ್ರ ಸಚಿವರಾಗಿ ಶೇ.100 ರಷ್ಟು ಅಭಿವೃದ್ಧಿ ಕೆಲಸ ಮಾಡಲು ಆಗದಿದ್ದರೂ ಕನಿಷ್ಠ 40 ರಿಂದ 50 ರಷ್ಟಾದರೂ ಅಭಿವೃದ್ಧಿ ಮಾಡದಿದ್ದ ಮೇಲೆ ಜನಸೇವೆ ಮಾಡೋಕೆ ಅಂತ ಏಕೆ ಬರಬೇಕು ಎಂದು ಲೇವಡಿ ಮಾಡಿದರು.
ಕನಕಪುರದಲ್ಲಿ ಇತ್ತೀಚಿಗೆ ನಡೆದ ಕನಕೋತ್ಸವದ ರೀತಿಯಲ್ಲಿ ಈ ಬಾರಿ ಮದ್ದೂರಿನಲ್ಲಿ ಗ್ರಾಮದೇವತೆ ಶ್ರೀ ಮದ್ದೂರಮ್ಮನವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮದ್ದೂರೋತ್ಸವವನ್ನು ಆಚರಿಸಲು ಗಮನ ಹರಿಸುತ್ತಿದ್ದೇನೆ ಎಂದರು.
ಗ್ರಾಪಂ ಅಧ್ಯಕ್ಷ ಕೆಂಪರಾಜು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಮುಖಂಡರಾದ ಹಳ್ಳಿಕೆರೆ ಮಾದೇಶ್, ಸಿದ್ದಪ್ಪಾಜಿ, ಸುರೇಶ್, ಜಯರಾಮು, ತಿಪ್ಪೂರು ಮನು, ಹೊನ್ನಯ್ಯ, ಸಿದ್ದು ಸತೀಶ್‌ಚಂದ್ರ, ಮಂಜೇಶ್, ರಾಜೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net