ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದ ನೇಸರ

ಶ್ರೀರಂಗಪಟ್ಟಣ ಹೊರವಲಯದ ಚಂದ್ರವನ ಆಶ್ರಮದ ಶ್ರೀಕಾಶಿಚಂದ್ರಮೌಳೇಶ್ವರ ದೇಗುಲದಲ್ಲಿ ಗುರುವಾರ ಮುಂಜಾನೆ 7.52ಕ್ಕೆ ಶಿವಲಿಂಗದ ಮೇಲೆ ಸೂರ್ಯರಶ್ಮಿ ದಕ್ಷಿಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಿದ್ದು, ಕಾಶಿಚಂದ್ರಮೌಳೇಶ್ವರನ ಮೇಲೆ ಹೊಂಗಿರಣಗಳು ಹಾದುಹೋದ ವೇಳೆ ಪೂಜೆ ಸಲ್ಲಿಸಲಾಯಿತು.
ಶ್ರೀರಂಗಪಟ್ಟಣ ಹೊರವಲಯದ ಚಂದ್ರವನ ಆಶ್ರಮದ ಶ್ರೀಕಾಶಿಚಂದ್ರಮೌಳೇಶ್ವರ ದೇಗುಲದಲ್ಲಿ ಗುರುವಾರ ಮುಂಜಾನೆ 7.52ಕ್ಕೆ ಶಿವಲಿಂಗದ ಮೇಲೆ ಸೂರ್ಯರಶ್ಮಿ ದಕ್ಷಿಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಿದ್ದು, ಕಾಶಿಚಂದ್ರಮೌಳೇಶ್ವರನ ಮೇಲೆ ಹೊಂಗಿರಣಗಳು ಹಾದುಹೋದ ವೇಳೆ ಪೂಜೆ ಸಲ್ಲಿಸಲಾಯಿತು.
Published on

ಶ್ರೀ ಕಾಶಿಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶಿಷ್ಟ ಕ್ಷಣ ಕಣ್ತುಂಬಿಕೊಂಡ ಭಕ್ತರು

ಶ್ರೀರಂಗಪಟ್ಟಣ: ವರ್ಷದ ಮೊದಲ ಸುಗ್ಗಿ ಮಕರ ಸಂಕ್ರಾಂತಿ ಹಬ್ಬದ ಶುಭದಿನದಂದು ಭಾಸ್ಕರ ತನ್ನ ಹೊಂಗಿರಣಗಳ ರಶ್ಮಿಯನ್ನು ಶ್ರೀ ಕಾಶಿಚಂದ್ರಮೌಳೇಶ್ವರನ ಲಿಂಗದ ಮೇಲೆ ಹಾಯುವ ಮೂಲಕ ದಕ್ಷಿಣಯಾನದಿಂದ ಉತ್ತರಕ್ಕೆ ಪಥ ಬದಲಿಸಿ ಉತ್ತರಾಯಣವನ್ನು ಪ್ರಾರಂಭಿಸಿದನು.
ಪಟ್ಟಣ ಹೊರವಲಯದ ಜೀವನದಿ ಕಾವೇರಿ ತೀರದ ಚಂದ್ರವನ ಆಶ್ರಮದಲ್ಲಿ ಮೈಸೂರು ಮಹಾರಾಜರಿಂದ ನಿರ್ಮಾಣವಾದ ಪುರಾತನ ಶ್ರೀ ಕಾಶಿಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ಮುಂಜಾನೆ 7.52 ರಲ್ಲಿ ಪ್ರಕೃತಿಯ ಈ ವೈಶಿಷ್ಟ್ಯ ಜರುಗಿದ್ದು, ಶ್ರೀ ಮಠದ ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಜಿ ಅವರು ಸೂರ್ಯ ಕಿರಣಗಳು ಮೊದಲು ಮಾತೆ ಶ್ರೀ ಪಾರ್ವತಿ ದೇವಿ ಮೂರ್ತಿ ಹಾಗೂ ಕಾಶಿಚಂದ್ರಮೌಳೇಶ್ವರನ ಶಿವಲಿಂಗ ಸ್ಪರ್ಶಿಸಿದ ಬಳಿಕ ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಿದರು.
ಇದಕ್ಕೂ ಮೊದಲು ಶ್ರೀ ಚಂದ್ರಮೌಳೇಶ್ವರನಿಗೆ ಮುಂಜಾನೆ 4.30ರಿಂದ ಜಲಾಭಿಷೇಕ, ರುದ್ರಾಭಿಷೇಕ, ರುದ್ರಪಾರಾಯಣ ನೇರವೇರಿಸಿ ವಿವಿಧ ಬಗೆಯ ವಿಶೇಷ ಹೂವುಗಳಿಂದ ಅಲಂಕರಿಸಿದ್ದು, ಸೂರ್ಯರಶ್ಮಿ ಸ್ಪರ್ಶದ ಬಳಿಕ ವಿಶೇಷ ಪೂಜೆ, ಮಹಾಮಂಗಳಾರತಿ ಸಲ್ಲಿಸಿದ ಶ್ರೀಗಳು ಮಠದ ಭಕ್ತರೊಂದಿಗೆ ಹೊರಭಾಗದಲ್ಲಿ ಗೋ ಪೂಜೆಯೊಂದಿಗೆ ಗೋವುಗಳಿಗೆ ಪ್ರಸಾದ ಅರ್ಪಿಸಿದರು. ಬಳಿಕ ದೇಗುಲದಲ್ಲಿ ಮುಂಜಾನೆಯಿಂದ ನೆರೆದು ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತರಿಗೆ ಹೂವು-ತೀರ್ಥದೊಂದಿಗೆ ಎಳ್ಳು-ಬೆಲ್ಲ ತಿನ್ನಲು ನೀಡಿ ಶುಭನುಡಿಗಳೊಂದಿಗೆ ಹಾರೈಸಿದರು.
ಪರಿಸರದ ವಾತಾವರಣದಲ್ಲಿ ಭಾರಿ ಮಂಜು ಕವಿದ ಕಾರಣ ಸೂರ್ಯನ ಕಿರಣಗಳು ಶಿವಲಿಂಗ ಹಾಗೂ ಪಾರ್ವತಿ ದೇವಿಯನ್ನು ಸ್ಪರ್ಶಿಸುವುದು ಕೆಲಕಾಲ ತಡವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net