ಎಫ್‌ಆರ್‌ಪಿ ದರ ಶೇ.8.5 ಕ್ಕೆ ನಿಗದಿ ಪಡಿಸಿ

ಮದ್ದೂರು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ  ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿ.ಸಿ.ಉಮೇಶ್, ಬೋರಾಪುರದ ಶಂಕರೇಗೌಡ, ವಿನೋದ್ ಬಾಬು, ಲಿಂಗಪ್ಪಾಜಿ, ಜಿ.ಎ.ಶಂಕರ್, ಜಿ.ರಾಮಕೃಷ್ಣ, ಅಶೋಕ್ ಇತರರಿದ್ದರು.
ಮದ್ದೂರು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿ.ಸಿ.ಉಮೇಶ್, ಬೋರಾಪುರದ ಶಂಕರೇಗೌಡ, ವಿನೋದ್ ಬಾಬು, ಲಿಂಗಪ್ಪಾಜಿ, ಜಿ.ಎ.ಶಂಕರ್, ಜಿ.ರಾಮಕೃಷ್ಣ, ಅಶೋಕ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಕಾರ್ಯಕರ್ತರಿಂದ ಧರಣೆ
ಮದ್ದೂರು: ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಪ್ರತಿಟನ್ ಕಬ್ಬಿಗೆ ಬಾಕಿ 50 ರೂ.ಪ್ರೋತ್ಸಾಹ ಧನ ನೀಡದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಸರಿಯಲ್ಲ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರ ಪ್ರೋತ್ಸಾಹ ಹಣ 50 ರೂ. ನೀಡದ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಗೊಲ್ಲರದೊಡ್ಡಿ ಅಶೋಕ್ ಮಾತನಾಡಿ, 2025-26 ನೇ ಸಾಲಿನಲ್ಲಿ ಸರಬರಾಜು ಮಾಡಿದ ಕಬ್ಬಿಗೆ ಸರ್ಕಾರವು 100 ರೂ.ಪ್ರೋತ್ಸಾಹ ಧನದಲ್ಲಿ ಸರ್ಕಾರವು ತಮ್ಮ ಪಾಲಿನ 50 ರೂ.ಗಳನ್ನು ಕಬ್ಬು ಬೆಳೆಗಾರಿಗೆ ಪಾವತಿಸಿದೆ. ಆದರೆ ಕಾರ್ಖಾನೆಯವರು ನೀಡಬೇಕಾಗಿರುವ 50 ರೂ. ಬಾಕಿ ಹಣ ನೀಡದೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರಿಗೆ ಕಾರ್ಖಾನೆಯವರು ನೀಡಬೇಕಾಗಿರುವ ಬಾಕಿ 50 ರೂಗಳನ್ನು ನೀಡಿದ ನಂತರ ಕಾರ್ಖಾನೆ ಪ್ರಾರಂಭಿಸಬೇಕು. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರವು ಎಫ್‌ಆರ್‌ಪಿ ದರ ಶೇ.10.25ಕ್ಕೆ ನಿಗಧಿಪಡಿಸಿದ್ದು, ಇದು ಅವೈಜ್ಞಾನಿಕವಾಗಿದ್ದು, ಆದ್ದರಿಂದ ಶೇ.8.5 ಕ್ಕೆ ಎಫ್‌ಆರ್‌ಪಿ ದರ ನಿಗದಿಪಡಿಸುವಂತೆ ಒತ್ತಾಯಿಸಿದರು.
ಉತ್ತರ ಕರ್ನಾಟಕದಲ್ಲಿ ಕಾರ್ಖಾನೆಗಳು ಸಾಗಾಣಿಕೆ ಮತ್ತು ಕಟಾವು ವೆಚ್ಚವನ್ನು ಭರಿಸುತ್ತಿದೆ. ಅದೇ ರೀತಿ ಸ್ಥಳಿಯ ಕಾರ್ಖಾನೆಗಳು ನೀಡಬೇಕೆಂದು ಆಗ್ರಹಿಸಿದರು.
ಕಾರ್ಖಾನೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ವಿ.ಸಿ.ಉಮೇಶ್, ಮುಖಂಡರಾದ ಬೋರಾಪುರದ ಶಂಕರೇಗೌಡ, ವಿನೋದ್ ಬಾಬು, ಲಿಂಗಪ್ಪಾಜಿ, ಜಿ.ಎ.ಶಂಕರ್, ಜಿ.ರಾಮಕೃಷ್ಣ, ವರದರಾಜು, ರವಿಕುಮಾರ್, ಅಪ್ಪಾಜಿ, ಚಂದ್ರ, ಶಶಿಧರ್, ಶಿವಾನಂದ್, ಪುಟ್ಟಸ್ವಾಮಿ, ಶ್ರೀನಿವಾಸ್, ಕಾಡೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net