ಮಾದರ ಮಹಾಸಭಾದ ತಾಲೂಕು ಘಟಕ ಅಸ್ತಿತ್ವಕ್ಕೆ

ಪಾಂಡವಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮಾದರ ಮಹಾಸಭಾದ ಸಭೆಯಲ್ಲಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಡಬ ಪುಟ್ಟರಾಜು, ಬೀರಶೆಟ್ಟಹಳ್ಳಿ ಮಲ್ಲಕಾರ್ಜುನಾ, ಟೌನ್ ಚಂದ್ರು ಇತರರು ಇದ್ದರು.
ಪಾಂಡವಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮಾದರ ಮಹಾಸಭಾದ ಸಭೆಯಲ್ಲಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಡಬ ಪುಟ್ಟರಾಜು, ಬೀರಶೆಟ್ಟಹಳ್ಳಿ ಮಲ್ಲಕಾರ್ಜುನಾ, ಟೌನ್ ಚಂದ್ರು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅವಿರೋಧವಾಗಿ ನೂತನ ಪದಾಧಿಕಾರಿಗಳ ಆಯ್ಕೆ
ಪಾಂಡವಪುರ: ಕರ್ನಾಟಕ ಮಾದರ ಮಹಾಸಭಾ ಬೆಂಗಳೂರು ರಾಜ್ಯ ಸಮಿತಿ ಆದೇಶದ ಮೇರೆಗೆ ತಾಲೂಕು ಮಾದರ ಮಹಾಸಭಾದ ಪದಾಧಿಕಾರಿಗಳನ್ನು ಸೋಮವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮಾದರ ಮಹಾಸಭಾದ ಸಭೆಯಲ್ಲಿ ತಾಲೂಕಿನ ಎಲ್ಲ ಗ್ರಾಮದ ಮಾದರ ಮುಖಂಡರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆದು ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಶಂಭೂನಹಳ್ಳಿ ಎಸ್.ಎಸ್.ರವಿಕುಮಾರ್, ಉಪಾಧ್ಯಕ್ಷರಾಗಿ ಬೀರಶೆಟ್ಟಹಳ್ಳಿ ಪಿ.ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಬೆಳ್ಳಾಳ್ಳೆ ಎಸ್.ರವಿ, ಖಜಾಂಚಿ ಚಿಕ್ಕಯಾರಹಳ್ಳಿ ಸಿ.ಎನ್.ರಾಜೇಶ್ ಹಾಗೂ ನಿರ್ದೇಶಕರಾಗಿ ಬಸ್ತಿಹಳ್ಳಿ ಎಸ್.ಮಲ್ಲೇಶ್, ಯೋಗೇಶ್, ಟೌನ್ ಶಶಿಕುಮಾರ್, ತುಕಾರಾಂ, ಅರ್ಚನಾ ಚಂದ್ರು ಆಯ್ಕೆಯಾದರು.
ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಕಡಬ ಪುಟ್ಟರಾಜು ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಮಾದರ ಮುಖಂಡರು ಹಾಗೂ ಸಮುದಾಯದ ಸ್ವಾಮೀಜಿಗಳ ನಿರ್ಣಯದಂತೆ ಮಾದಿಗ ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗಾಗಿ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಮಹಾಸಭಾದ ನಿರ್ದೇಶನದಂತೆ ಜಿಲ್ಲಾ ಮತ್ತು ತಾಲೂಕು ಘಟಕದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಇದರ ಜತೆಗೆ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ. ಮಹಾಸಭಾದ ಮೂಲ ಉದ್ದೇಶ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯದಂತೆ ಹಾಗೂ ವಿದ್ಯಾವಂತ ಯುವಕರು, ಪದವೀದರರು ಉದ್ಯೋಗದಿಂದ ವಂಚಿತರಾಗದಂತೆ ಸಂಘ ಎಚ್ಚರಿಕೆಯಿಂದ ಕೆಲಸ ಮಾಡಲಿದೆ. ಸ್ಥಳೀಯವಾಗಿ ಸಹಕಾರ ಸಂಘವನ್ನು ತೆರೆದು ಜನಾಂಗವನ್ನು ಆರ್ಥಿಕವಾಗಿ ಸದೃಢಗೊಳಸಲಾಗುವುದು ಎಂದು ತಿಳಿಸಿದರು.
ಮಾಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷ ಶಂಭೂನಹಳ್ಳಿ ಎಸ್.ಎಚ್.ರವಿಕುಮಾರ್ ಮಾತನಾಡಿ, ಮಹಾಸಭಾದ ರಾಜ್ಯ ಸಂಘಟನೆಯ ನಿರ್ದೇಶನದ ಮೇರೆಗೆ ತಾಲೂಕು ಸಂಘ ಸ್ಥಾಪಿತವಾಗಿದೆ. ಸಂಘಟನೆಯ ಸಭೆಯಲ್ಲಿ ಸಮುದಾಯ, ವಿದ್ಯಾರ್ಥಿಗಳು ಅಭ್ಯುದಯ, ಯುವಕರ ಭವಿಷ್ಯ ಮತ್ತು ಸಮಾಜಕ್ಕೆ ಸೇರಿದ ಇತರ ವಿಚಾರಗಳನ್ನು ಗಂಭೀರವಾಗಿ ಚರ್ಚಿಸಲಾಗಿದೆ. ಜನಾಂಗಕ್ಕೆ ಆಗಿರುವ ಅನ್ಯಾಯಗಳನ್ನು ಸರಿಪಡಿಸುವ ಉದ್ದೇಶವಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.
ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಬಿ.ಕಾವಲ್ ಕಾಂತರಾಜು, ರಾಜ್ಯ ಕಾರ್ಯಕಾರಿಣಿ ಸಂಚಾಲಕ ಎನ್.ಆರ್.ಚಂದ್ರಶೇಖರ್, ಜಿಲ್ಲಾ ಸಮಿತಿ ನಿರ್ದೇಶಕ ಕೆಂಪಯ್ಯ, ಎಚ್.ಎಂ.ಪುಟ್ಟರಾಜು, ಮುಖಂಡರಾದ ಅಲ್ಪಹಳ್ಳಿ ಗೋವಿಂದಯ್ಯ, ಟೌನ್ ಚಂದ್ರು, ಬಸ್ತಿಹಳ್ಳಿ ಕುಮಾರ್, ಆರ್.ಟಿ.ಕಾಳಯ್ಯ ಇತರರು ಇದ್ದರು.
ಫೋಟೋ : 3-ಪಿಎನ್‌ಪಿ 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net