ಮದ್ದೂರು ತಾಲೂಕಿನ ನಿಲುವಾಗಿಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಾನಿ ಕೆಇಬಿ ನಿವೃತ್ತ ಅಧಿಕಾರಿ ಎನ್.ತಿಮ್ಮೇಗೌಡ ಅವರು ಉಚಿತವಾಗಿ ನೀಡಿದ್ದ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಮುಖ್ಯ ಶಿಕ್ಷಕರ ರವೀಶ್ ವಿತರಣೆ ಮಾಡಿದರು. ಎನ್.ಪಿ.ಕೃಷ್ಣೇಗೌಡ, ಕನಕರತ್ನಾ, ಮಹೇಶ್, ಲಕ್ಷ್ಮೀಪತಿ, ಸುಕನ್ಯಾ ಇದ್ದರು.
ಮದ್ದೂರು:ವಿದ್ಯಾರ್ಥಿಗಳು ವಿದ್ಯೆಯ ಮಹತ್ವ ಅರಿತು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಉನ್ನತ ಸಾಧನೆ ಮಾಡಬೇಕೆಂದು ಮುಖ್ಯ ಶಿಕ್ಷಕ ರವೀಶ್ ತಿಳಿಸಿದರು.
ತಾಲೂಕಿನ ನಿಲುವಾಗಿಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಾನಿ ಕೆಇಬಿ ನಿವೃತ್ತ ಅಧಿಕಾರಿ ಎನ್.ತಿಮ್ಮೇಗೌಡ ಅವರು ಉಚಿತವಾಗಿ ನೀಡಿದ್ದ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಗುರುವಾರ ವಿತರಣೆ ಮಾಡಿ ಮಾತನಾಡಿದರು.
ಸರ್ಕಾರ, ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಅನುಕೂಲ ಕಲ್ಪಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಗ್ರಾಮದ ಮುಖಂಡ ಎನ್.ಪಿ.ಕೃಷ್ಣೇಗೌಡ, ಶಿಕ್ಷಕರಾದ ಕನಕರತ್ನ, ಮಹೇಶ್, ಲಕ್ಷ್ಮೀಪತಿ, ಸುಕನ್ಯ ಇದ್ದರು.