ನಿತ್ಯ ಅಭ್ಯಾಸದಿಂದ ಶೈಕ್ಷಣಿಕ ಪ್ರಗತಿಯಲ್ಲಿ ಯಶಸ್ಸು

ಪಟ್ಟಣದ ಪರಿವರ್ತನ ಶಿಕ್ಷಣ ಸಂಸ್ಥೆಯಲ್ಲಿ  2026ನೇ ಸಾಲಿನ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ತಹಸೀಲ್ದಾರ್ ಬಿ.ಎನ್.ಗಿರೀಶ್ ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು. ಸಂಸ್ಥೆಯ ಟ್ರಸ್ಟಿ ಸಂಕ್ರಾಂತಿ ಮಂಜುರಾಮ್ ಪ್ರಾಂಶುಪಾಲ ಪ್ರೊ.ಚನ್ನಕೇಶವ ಇತರರಿದ್ದರು.
ಪಟ್ಟಣದ ಪರಿವರ್ತನ ಶಿಕ್ಷಣ ಸಂಸ್ಥೆಯಲ್ಲಿ 2026ನೇ ಸಾಲಿನ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ತಹಸೀಲ್ದಾರ್ ಬಿ.ಎನ್.ಗಿರೀಶ್ ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು. ಸಂಸ್ಥೆಯ ಟ್ರಸ್ಟಿ ಸಂಕ್ರಾಂತಿ ಮಂಜುರಾಮ್ ಪ್ರಾಂಶುಪಾಲ ಪ್ರೊ.ಚನ್ನಕೇಶವ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಚನ್ನಪಟ್ಟಣ ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ಸಲಹೆ
ಶ್ರೀರಂಗಪಟ್ಟಣ: ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಆತ್ಮಭರವಸೆಯೊಂದಿಗೆ ನಿತ್ಯ ಅಭ್ಯಾಸ ಮಾಡಿದರೆ ಶೈಕ್ಷಣಿಕ ಪ್ರಗತಿಯಲ್ಲಿ ಯಶಸ್ಸು ಸಾಧ್ಯ ಎಂದು ಚನ್ನಪಟ್ಟಣ ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ತಿಳಿಸಿದರು.
ಪಟ್ಟಣದ ಪರಿವರ್ತನ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2026ನೇ ಸಾಲಿನ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿದಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಕ್ರಿಯಾಶೀಲತೆ,ಬದ್ಧತೆ ಬಹಳ ಮುಖ್ಯ. ನಿರಂತರ ಅಭ್ಯಸದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಪರಿವರ್ತನ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಸಂಕ್ರಾಂತಿ ಮಂಜುರಾಮ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಉತ್ಸಾಹ, ಪ್ರೇರಣೆ ಹಾಗೂ ಸಕಾರಾತ್ಮಕ ಮನೋಭಾವದೊಂದಿಗೆ ಪದವಿಪೂರ್ವ ಶಿಕ್ಷಣದಲ್ಲಿ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ಆಶಯಕ್ಕೆ ಸಂಸ್ಥೆ ಬೆಂಬಲವಾಗಿ ನಿಲ್ಲಲ್ಲಿದೆ ಎಂದು ಭರವಸೆ ನೀಡಿದರು.
ಪರಿವರ್ತನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಚನ್ನಕೇಶವ, ಶಾಲಾ ಮುಖ್ಯಶಿಕ್ಷಕ ಜೆರ್ಲಿನ್ ಕುಮಾರ್, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net