ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮದ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪೆನ್ನು, ಹೂಗುಚ್ಛ ನೀಡಿ, ಬರಮಾಡಿಕೊಳ್ಳಲಾಯಿತು.ರಮ್ಯಾ,ಅಶೋಕ,ುಹದೇವಶೆಟ್ಟಿ ಇತರರಿದ್ದರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮದ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವನ್ನು ಸೋಮವಾರ ವಿಶೇಷವಾಗಿ ಆಚರಿಸಲಾಯಿತು.
ಗ್ರಾಮ ಪಂಚಾಯತಿ ಪಿಡಿಒ ವಿಶ್ವನಾಥ್ ಶಾಲಾ ವಿದ್ಯಾರ್ಥಿಗಳಿಗೆ ಹೂಗುಚ್ಛ, ಪೆನ್ನುಗಳನ್ನು ನೀಡಿ ಶುಭ ಹಾರೈಸಿ ಸ್ವಾಗತಕೋರಿದರು. ಬಳಿಕ ಮಾತನಾಡಿ, ರಾಜ್ಯದ ಅತ್ಯುತ್ತಮ ಶಾಲೆ ಎಂದು ಪ್ರಸಿದ್ಧವಾಗಿರುವ ಪ್ರೌಢಶಾಲೆಯು ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಶೇ.100 ಫಲಿತಾಂಶ ತೆಗೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದೆ. ಅದಲ್ಲದೆ, 2025-26ನೇ ಸಾಲಿನಲ್ಲಿ ಉತ್ತಮ ಶಾಲಾಭಿವೃದ್ಧಿ ಸಮಿತಿ ಎಂಬ ಪ್ರಶಸ್ತಿಯನ್ನು ಕೂಡ ಶಿಕ್ಷಣ ಇಲಾಖೆಯಿಂದ ನೀಡಿರುವುದು ಶಾಲೆಯ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡ ಫಣೀಶ್ ಮಾತನಾಡಿ, ಅತ್ತಿಗೋಡು ಶಾಲೆಯೂ ಗ್ರಾಮೀಣ ಭಾಗದಲ್ಲಿ ಮಾದರಿ ಸರ್ಕಾರಿ ಶಾಲೆಯಾಗಿ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕಿಕೊಟ್ಟಿದೆ. ಈ ಹಿನ್ನೆಲೆ ದೂರದ ಊರುಗಳಿಂದ ವಿದ್ಯಾರ್ಥಿಗಳು ಆಗಮಿಸಿ, ಈ ಶಾಲೆಗೆ ದಾಖಲಾಗುತ್ತಿದ್ದಾರೆ. ಸರ್ಕಾರಿ ಶಾಲೆಯ ಸವಲತ್ತುಗಳನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮ್ಯಾ, ಅಶೋಕ, ಗ್ರಾ.ಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಅರ್ಚಕ ಅಮರಯ್ಯ ಹಿರೇಮಠ, ನವೀನ್, ಮುಖ್ಯಶಿಕ್ಷಕ ನಾಗಶೆಟ್ಟಿ, ಶಿಕ್ಷಕರಾದ ರಜನಿಕಾಂತ್, ದೇವರಾಜ, ಸ್ವಾಮಿ, ಮಾದನಾಯಕ್, ಚೆಲುವರಾಜು, ರವಿ, ಇಂದ್ರಮ್ಮಾ, ಪುಷ್ಪಲತಾ, ಇದ್ದರು.