ಎಲ್ಲ ಕ್ಲಬ್‌ಗಳು ಒಗ್ಗೂಡಿದರೆ ಬಲ ಹೆಚ್ಚಳ

 ಮಳವಳ್ಳಿ ಸಮೀಪದ ಮೂಗನಕೊಪ್ಪಲು ಬಳಿ ಮಂಗಳವಾರ ಆಯೋಜಿಸಿದ್ದ ಲಯನ್ಸ್ ಕ್ಲಬ್ ಆಫ್ ಮಳವಳ್ಳಿ ನಾಡಪ್ರಭು ಸಂಸ್ಥೆಯ 2026 - 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಡಾ.ಎನ್. ಕೃಷ್ಣೇಗೌಡ ಉದ್ಘಾಟಿಸಿದರು. ಡಾ.ಜಿ.ಎ.ರಮೇಶ್, ಟಿ.ಎಸ್. ಚಂದ್ರು, ಈರೇಶ್, ಎನ್.ರವಿ, ಗಿರೀಶ್, ರಾಜೇಶ್ ಗೌಡ, ಅಣ್ಣೇಗೌಡ, ಮಹೇಶ್, ಶಂಭುಲಿಂಗ ಸ್ವಾಮಿ, ರಘು, ಮಲ್ಲಿಕಾರ್ಜುಯ್ಯ, ಕೆ. ಚಂದ್ರು, ಎನ್.ನಂದೀಶ್, ಎಂ.ಸಿದ್ದೇಗೌಡ ಇತರರು ಇದ್ದರು.
ಮಳವಳ್ಳಿ ಸಮೀಪದ ಮೂಗನಕೊಪ್ಪಲು ಬಳಿ ಮಂಗಳವಾರ ಆಯೋಜಿಸಿದ್ದ ಲಯನ್ಸ್ ಕ್ಲಬ್ ಆಫ್ ಮಳವಳ್ಳಿ ನಾಡಪ್ರಭು ಸಂಸ್ಥೆಯ 2026 - 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಡಾ.ಎನ್. ಕೃಷ್ಣೇಗೌಡ ಉದ್ಘಾಟಿಸಿದರು. ಡಾ.ಜಿ.ಎ.ರಮೇಶ್, ಟಿ.ಎಸ್. ಚಂದ್ರು, ಈರೇಶ್, ಎನ್.ರವಿ, ಗಿರೀಶ್, ರಾಜೇಶ್ ಗೌಡ, ಅಣ್ಣೇಗೌಡ, ಮಹೇಶ್, ಶಂಭುಲಿಂಗ ಸ್ವಾಮಿ, ರಘು, ಮಲ್ಲಿಕಾರ್ಜುಯ್ಯ, ಕೆ. ಚಂದ್ರು, ಎನ್.ನಂದೀಶ್, ಎಂ.ಸಿದ್ದೇಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಜಿಲ್ಲಾ ಪ್ರಾಂತಪಾಲ ಡಾ.ಜಿ.ಎ.ರಮೇಶ್ ಸಲಹೆ
  • ನೂತನ ಪದಾಧಿಕಾರಿಗಳಿಗೆ ಪದಗ್ರಹಣ

ಮಳವಳ್ಳಿ:

ಲಯನ್ಸ್ ಕ್ಲಬ್‌ನ್ನು ಪ್ರತ್ಯೇಕ ವಿಭಾಗಗಳಾಗಿ ಮಾಡಿಕೊಂಡು ಸದಸ್ಯರ ಸಂಖ್ಯೆಗಳನ್ನು ಕಡಿಮೆ ಮಾಡಿಕೊಳ್ಳುವ ಬದಲಾಗಿ ಎಲ್ಲ ಕ್ಲಬ್ ಗಳು ಒಟ್ಟಾಗಿ ಸೇರಿದರೆ ಸದಸ್ಯರ ಬಲ ಹೆಚ್ಚಳದ ಜತೆಗೆ ದೊಡ್ಡ ಮಟ್ಟದಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮಾಡಬಹುದು ಎಂದು ಕ್ಲಬ್‌ನ ಮಾಜಿ ಜಿಲ್ಲಾ ಪ್ರಾಂತಪಾಲ ಡಾ.ಜಿ.ಎ.ರಮೇಶ್ ತಿಳಿಸಿದರು.

ಪಟ್ಟಣದ ಹೊರ ವಲಯದ ಮೂಗನ ಕೊಪ್ಪಲು ಗ್ರಾಮದ ಬಳಿ ಮಂಗಳವಾರ ಆಯೋಜಿಸಿದ್ದ ಲಯನ್ಸ್ ಕ್ಲಬ್ ಆಫ್ ಮಳವಳ್ಳಿ ನಾಡಪ್ರಭು ಸಂಸ್ಥೆಯ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಬೋಧನೆ ನಂತರ ಮಾತನಾಡಿದ ಅವರು, ಸಂಘಟನೆ ವಿಸ್ತರಣೆಗೆ ಸಹಕಾರಿ ಆಗುವುದರಿಂದ ಈ ನಿಟ್ಟಿನ ಎಲ್ಲ ಕ್ಲಬ್‌ನ ಮುಖಂಡರು ಕಾರ್ಯೋನ್ಮುಖರಾಗಿ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಜಿಲ್ಲಾ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಡಾ.ಎನ್. ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಲಬ್‌ನ ಸೇವಾ ಕಾರ್ಯಗಳು ಸದಸ್ಯರು ಹಾಗೂ ದಾನಿಗಳ ಧನಸಹಾಯದಿಂದ ನಡೆಯಬೇಕೆ ಹೊರತು ಯಾವುದೇ ಸರ್ಕಾರಿ ಹಾಗೂ ಸಂಸ್ಥೆಗಳ ನೆರವು ದೊರಕುವುದಿಲ್ಲ. ಹೀಗಾಗಿ ಸದಸ್ಯರು ತಮ್ಮ ದುಡಿಮೆಯ ಅಲ್ಪ ಭಾಗವನ್ನು ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದರು.
ಸಮಾರಂಭದಲ್ಲಿ ಸಂಸ್ಥೆ ನೂತನ ಅಧ್ಯಕ್ಷರಾಗಿ ಲ.ಟಿ.ಎಸ್. ಚಂದ್ರು, ಕಾರ್ಯದರ್ಶಿ ಈರೇಶ್, ಖಜಾಂಚಿ ಎನ್.ರವಿ, ಉಪಾಧ್ಯಕ್ಷರಾಗಿ ಗಿರೀಶ್, ರಾಜೇಶ್‌ಗೌಡ, ಸಂಪನ್ಮೂಲ ವ್ಯಕ್ತಿಯಾಗಿ ಅಣ್ಣೇಗೌಡ, ಮೆಂಬರ್ ಶಿಫ್ ಚೇರ್ಮನ್ ಆಗಿ ಆರ್. ಎನ್.ಮಹೇಶ್, ಸರ್ವೀಸ್ ಚೇರ್ಮನ್ ಶಂಭುಲಿಂಗ ಸ್ವಾಮಿ, ಮಾರುಕಟ್ಟೆ ಹಾಗೂ ಕಮ್ಯುನಿಕೇಷನ್ ಮುಖ್ಯಸ್ಥ ರಘು, ನಿರ್ದೇಶಕರಾಗಿ ಮಲ್ಲಿಕಾರ್ಜುಯ್ಯ, ಕೆ. ಚಂದ್ರು, ಎನ್. ನಂದೀಶ್ ಅಧಿಕಾರ ವಹಿಸಿಕೊಂಡರು. ನೂತನ ಸದಸ್ಯರಿಗೆ ಜಿಲ್ಲಾ ಉಪ ರಾಜ್ಯಪಾಲ ಎಂ. ಸಿದ್ದೇಗೌಡ ಪ್ರತಿಜ್ಞಾವಿಧಿ ಬೋಧಿಸಿ ಸ್ವಾಗತಿಸಿದರು.
ಆರ್ಗ್ಯಾನಿಕ್ ಫಾರಂ ಜಿಲ್ಲಾ ಚೇರ್ಮನ್ ಲ.ಅಣ್ಣೇಗೌಡ, ನಿರ್ಗಮಿತ ಅಧ್ಯಕ್ಷ ಮಂಚಯ್ಯ, ಜಿಲ್ಲಾ ಕೋ-ಆರ್ಡಿನೇಟರ್ ಎಂ.ವಿ. ನಂದೀಶ್, ಜಯಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net