ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದಲ್ಲಿ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ನೀರು ಬಳಕೆದಾರರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಜೈನ್ ಇರಿಗೇಷನ್ ಸಂಸ್ಥೆಯ ಇಂಜಿನಿಯ್ ಸಿ.ಎಸ್.ಗುರುದತ್ತ, ರಾಘವೇಂದ್ರ, ಆರ್.ಗುರುಸ್ವಾಮಿ, ಸಿದ್ದರಾಜು, ನಾಗರಾಜು, ಮಹದೇವು, ಶಿವಣ್ಣ, ನಾರಾಯಣಿ, ಸುಧಾ, ಶಿವಪ್ರದಾಸ್, ನಿಂಗಯ್ಯ ಇದ್ದರು.
ಮಳವಳ್ಳಿ: ಪೂರಿಗಾಲಿ ಹನಿ ನೀರಾವರಿ ಯೋಜನೆ ಮೂಲಕ ಪ್ರಾಯೋಗಿಕವಾಗಿ ಕೃಷಿ ಭೂಮಿಗೆ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗಿದ್ದು, ಫಲಾನುಭವಿ ರೈತರು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪೂರಕ ಬೆಳೆಗಳನ್ನು ಬೆಳೆಯುವಂತೆ ಜೈನ್ ಇರಿಗೇಷನ್ ಸಂಸ್ಥೆಯ ಇಂಜಿನಿಯರ್ ಸಿ.ಎಸ್.ಗುರುದತ್ತ ತಿಳಿಸಿದರು.
ತಾಲೂಕಿನ ಮಲಿಯೂರು ಗ್ರಾಮದಲ್ಲಿ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ನೀರು ಬಳಕೆದಾರರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಿರಂತರವಾಗಿ 9 ತಿಂಗಳ ಕಾಲ ನೀರು ಪೂರೈಕೆ ಮಾಡಲಾಗುವುದು. ರೈತರು ತಮ್ಮ ಜಮೀನುಗಳಲ್ಲಿ ಅಳವಡಿಕೆ ಮಾಡಿರುವ ಪೈಪ್‌ಲೈನ್‌ಗಳನ್ನು ಸೂಕ್ತ ನಿರ್ವಹಣೆ ಮಾಡಿಕೊಂಡು ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು.
ಸಂಸ್ಥೆಯ ಕೃಷಿ ಸಲಹೆಗಾರ ರಾಘವೇಂದ್ರ ತಗ್ಗಿ ಮಾತನಾಡಿ, ಪ್ರಸ್ತುತ ಯಾವುದೇ ನಿರ್ಬಂಧವಿಲ್ಲದೇ ಬೆಳೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಕಬ್ಬು, ಭತ್ತ ಹಾಗೂ ಬಾಳೆ ಬೆಳೆಗಳನ್ನು ಹೊರತುಪಡಿಸಿ ಇತರೆ ತೋಟಗಾರಿಕೆ ಬೆಳೆ ಬೆಳೆಯಲು ರೈತರಿಗೆ ಸಲಹೆ ನೀಡಿದರು.
ನೀರು ಬಳಕೆ ದಾರರ ಸಂಘದ ಅಧ್ಯಕ್ಷ ಆರ್.ಗುರುಸ್ವಾಮಿ ಮಾತನಾಡಿ, ರೈತರ ಜೀವನಮಟ್ಟ ಸುಧಾರಣೆಗೆ ಹನಿ ನೀರಾವರಿ ಯೋಜನೆ ಮಹತ್ವವನ್ನು ಪಡೆದಿದ್ದು, ಯಾವುದೇ ಗೊಂದಲಕ್ಕೀಡಾಗದೆ ಯೋಜನೆ ಅನುಷ್ಠಾನ ಸಂಸ್ಥೆಯ ಸಲಹೆಗಳನ್ನು ಪಡೆದುಕೊಂಡು ಯಶಸ್ವಿಯಾಗಿ ಕೃಷಿ ಮಾಡುವ ಮೂಲಕ ನಮ್ಮ ಸಂಘವನ್ನು ಮಾದರಿಯಾಗಿ ಮುನ್ನಡೆಸಲು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ನಾಗರಾಜು, ಮಹದೇವು, ಶಿವಣ್ಣ, ನಾರಾಯಣಿ, ಸುಧಾ, ಶಿವಪ್ರಸಾದ್, ಕಾರ್ಯದರ್ಶಿ ನಿಂಗಯ್ಯ ಇತರರು ಇದ್ದರು.