ಜು.26ರಂದು ದೊಡ್ಡಬ್ಯಾಡರಹಳ್ಳಿ ರಂಗೋಲಿ, ಗಾಳಿಪಟ ಸ್ಪರ್ಧೆ: ಆಯೋಜನಾ ಸಮಿತಿ ಸದಸ್ಯ ಸಂತೋಷ್ ಮಾಹಿತಿ

  ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯಮಟ್ಟದ ವಿವಿಧ ಸ್ಪರ್ಧೆಯ ಫೋಸ್ಟರ್ ಬಿಡುಗಡೆ ಮಾಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯಮಟ್ಟದ ವಿವಿಧ ಸ್ಪರ್ಧೆಯ ಫೋಸ್ಟರ್ ಬಿಡುಗಡೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಥಮ ಏಕಾದಶಿ ಅಂಗವಾಗಿ ಆಯೋಜನೆ
  • ಗ್ರಾಮೀಣ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯವ ಪ್ರಯತ್ನ
ಮಂಡ್ಯ: ಪ್ರಥಮ ಏಕಾದಶಿ ಅಂಗವಾಗಿ ಪಾಂಡವಪುರ ತಾಲೂಕು ದೊಡ್ಡಬ್ಯಾಡರಹಳ್ಳಿ ಗ್ರಾಮದಲ್ಲಿ ಜು.26ರಂದು ರಾಜ್ಯಮಟ್ಟದ ರಂಗೋಲಿ, ಗುಂಡು ಎತ್ತುವ ಮತ್ತು ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಸದಸ್ಯ ಸಂತೋಷ್ ತಿಳಿಸಿದರು.
ಗಾಳಿಪಟ ಸ್ಪರ್ಧೆಗೆ ದೊಡ್ಡಬ್ಯಾಡರಹಳ್ಳಿ ಗ್ರಾಮದಲ್ಲಿಯೇ ವಿಶೇಷ ಇತಿಹಾಸ ಹೊಂದಿದೆ. ಗ್ರಾಮೀಣ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯವ ಪ್ರಯತ್ನದ ಹಿನ್ನಲೆ ರಾಜ್ಯಮಟ್ಟದ ಸ್ಪರ್ಧೆ ಆಯೋಜನೆಗೆ ಮುಂದಾಗಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಾಳಿಪಟ ಸ್ಪರ್ಧೆಯು ದೊಡ್ಡ, ಮಧ್ಯಮ ಹಾಗೂ ಸಣ್ಣ ಗಾಳಿಪಟ ಎಂಬ ಮೂರು ವಿಭಾಗದಲ್ಲಿ ನಡೆಯಲಿದೆ. ದೊಡ್ಡ ಪಟ ವಿಭಾಗಕ್ಕೆ ಪ್ರಥಮ ಬಹುಮಾನ 2,000 ರೂ, ದ್ವಿತೀಯ 1,500 ರೂ, ತೃತೀಯ 1000 ರೂ, ಮಧ್ಯಮ ಪಟ ವಿಭಾಗಕ್ಕೆ ಪ್ರಥಮ 1,500 ರೂ, ದ್ವಿತೀಯ 1,000 ರೂ, ತೃತೀಯ 500 ರೂ, ಸಣ್ಣಪಟ ವಿಭಾಗಕ್ಕೆ 1,000 ರೂ, 750 ರೂ, 500 ರೂ ಬಹುಮಾನ, ಗುಂಡು ಎತ್ತುವ ಸ್ಪರ್ಧೆಗೆ ಪ್ರಥಮ 3,000 ರೂ, ದ್ವಿತೀಯ 2,000 ರೂ, ತೃತೀಯ 1000 ರೂ ಬಹುಮಾನ ಇರಲಿದೆ. ಮಧ್ಯಾಹ್ನ 2ಗಂಟೆಯಿಂದ ಗಾಳಿಪಟ ಹಾಗೂ 3ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೂ ಪ್ರೋತ್ಸಾಹ ನೀಡಲು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ 1,000 ರೂ, ದ್ವಿತೀಯ 750 ರೂ ಹಾಗೂ ತೃತೀಯ 500 ರೂ ಬಹುಮಾನ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.
ಸ್ಪರ್ಧೆಗಳ ತೀರ್ಪುಗಾರರಾಗಿ ಗ್ರಾಮದವರಲ್ಲದ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲಾಗುವುದು. ರಾತ್ರಿ 7 ಗಂಟೆಗೆ ರಾಜ ಸುಯೋಧನ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಇದರೊಟ್ಟಿಗೆ ಬೆಳಗ್ಗೆಯಿಂದಲೇ ಜೀವಧಾರೆ ಟ್ರಸ್ಟ್‌ನಿಂದ ರಕ್ತದಾನ ಶಿಬಿರ ನಡೆಯಲಿದೆ ಎಂದು ಹೇಳಿದರು.
ಗ್ರಾಮದ ಪಟೇಲ್ ಆನಂದ, ಮನೋಜ್, ಆನಂದ್, ರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net